ಮೀನುಗಾರಿಕಾ ಡಿಸೇಲ್ ಸರಬರಾಜಿನಲ್ಲಿ ಅಡೆತಡೆ ಆಗದಂತೆ ಕ್ರಮ: ಸಚಿವ ಹಾರ್ದಿಪ್ ಸಿಂಗ್

Update: 2022-07-21 15:20 GMT

ಮಲ್ಪೆ: ಮುಂದಿನ ಮೀನುಗಾರಿಕೆ ಋತು ಆರಂಭದಲ್ಲಿ ಮೀನು ಗಾರಿಕೆಗೆ ನೀಡಲಾಗುತ್ತಿರುವ ಡಿಸೇಲ್ ಸರಬರಾಜಿ ನಲ್ಲಿ ಯಾವುದೇ ಅಡೆತಡೆ ಗಳು ಆಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹಾರ್ದಿಪ್ ಸಿಂಗ್ ಪುರಿ ಅವರು ಕರ್ನಾಟಕ ಕರಾವಳಿ ಮೀನುಗಾರ ಕ್ರಿಯಾ ಸಮಿತಿಯ ನಿಯೋಗಕ್ಕೆ ಭರವಸೆ ನೀಡಿದ್ದಾರೆ.

ಗುರುವಾರ ರಾಜ್ಯ ಕೃಷಿ ಸಚಿವೆ, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಮೀನುಗಾರರ ನಿಯೋಗವು ಕೇಂದ್ರ ಪೆಟ್ರೋಲಿಯಂ ಸಚಿವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದು, ಮೀನುಗಾರರು ಎದುರಿಸುತ್ತಿ ರುವ ಸಮಸ್ಯೆಗಳು ಮತ್ತು ಕನ್ಸ್ಯೂಮರ್ ಹಾಗೂ ರಿಟೇಲ್ ಡಿಸೇಲ್ ದರದ ವ್ಯತ್ಯಾಸದ ಬಗ್ಗೆ ಚರ್ಚಿಸಿ ಬಂಕ್‌ಗಳ ವಿತರಣೆಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಚರ್ಚಿಸಿ, ಮೀನುಗಾರರಿಗೆ ಅನುಕೂಲವಾಗು ವಂತೆ ಆದೇಶ ಹೊರಡಿಸ ಬೇಕು ಎಂದು ಮೀನುಗಾರರ ನಿಯೋಗವು ಮನವಿ ಸಲ್ಲಿಸಿತು.

ನಿಯೋಗದಲ್ಲಿ ದ.ಕ. ಮೀನು ಮಾರಾಟ ಫೆಡರೇಷನ್‌ನ ಅಧ್ಯಕ್ಷ ಯಶಪಾಲ್ ಸುವರ್ಣ, ಕರ್ನಾಟಕ ಕರಾವಳಿ ಮೀನುಗಾರ ಕ್ರಿಯಾ ಸಮಿತಿಯ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಉಪಾಧ್ಯಕ್ಷ ರಾಮಚಂದ್ರ ಕುಂದರ್, ಪ್ರಧಾನ ಕಾರ್ಯದರ್ಶಿ ಕಿಶೋರ್ ಡಿ.ಸುವರ್ಣ, ಕೋಶಾಧಿಕಾರಿ ಸೋಮನಾಥ್ ಕಾಂಚನ್, ಸಲಹೆ ಗಾರ ಸತೀಶ್ ಕುಂದರ್ ಮಲ್ಪೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News