ಸೇನಾಪಡೆ ಸೇರ್ಪಡೆಗೆ ತರಬೇತಿ

Update: 2022-08-02 15:50 GMT
ಸಾಂದರ್ಭಿಕ ಚಿತ್ರ

ಉಡುಪಿ, ಆ.2: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಭಾರತೀಯ ಸೇನೆ/ಇತರೆ ಸಮವಸ್ತ್ರ ಸೇವೆಗಳಿಗೆ ಆಯ್ಕೆಯಾಗಲು ಉದ್ದೇಶಿಸಿರುವ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ವಸತಿಯುತ 4 ತಿಂಗಳ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಯನ್ನು ನೀಡಲು ಅರ್ಜಿ ಗಳನ್ನು ಆಹ್ವಾನಿಸಲಾಗಿದೆ. 

ಈ ತರಬೇತಿ ಬಾಲಕರಿಗೆ ಮಾತ್ರ ಇದ್ದು, ೧೦ನೇ ತರಗತಿ ಉತ್ತೀರ್ಣ ರಾಗಿರುವ, ೧ ಅಕ್ಟೋಬರ್ ೨೦೦೦ದಿಂದ ೦೧ ಏಪ್ರಿಲ್ ೨೦೦೫ರ ನಡುವೆ ಜನಿಸಿರುವ ಪರಿಶಿಷ್ಟ ಜಾತಿಯ ಯುವಕರು ಆಗಸ್ಟ್ ೫ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್‌ಸೈಟ್ - https://sw/kar.nic.in- ಅನ್ನು ಸಂಪರ್ಕಿಸಬಹುದು.

ಆಸಕ್ತರು ತಮ್ಮ ಅರ್ಜಿ ಹಾಗೂ ಪೂರಕ ದಾಖಲೆಗಳನ್ನು ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ರಜತಾದ್ರಿ ಬಿ ಬ್ಲಾಕ್, ೨ನೇ ಮಹಡಿ, ಮಣಿಪಾಲ -೫೭೬೧೦೪, ಉಡುಪಿ ಜಿಲ್ಲೆ ಇಲ್ಲಿಗೆ ಖುದ್ದಾಗಿ ಅಥವಾ ನೋಂದಾಯಿತ ಅಂಚೆ ಮೂಲಕ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ: ಉಡುಪಿ ಜಿಲ್ಲೆ- ೦೮೨೦ ೨೫೭೪೮೯೨ ಮತ್ತು ಪರೀಕ್ಷಾ ಪೂರ್ವ ತರಬೇತಿ ಕೇಂದ್ರ- ೦೮೦-೨೨೨೦೭೭೮೪ನ್ನು ಸಂಪರ್ಕಿಸುವಂತೆ ಸಮಾಜ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News