ನೇಕಾರರ ವೃತ್ತಿ ಉಳಿಸಲು ವರ್ಷದೊಳಗೆ 100 ಮಂದಿ ಮುಖ್ಯಭೂಮಿಕೆಗೆ: ರತ್ನಾಕರ್ ಇಂದ್ರಾಳಿ

Update: 2022-08-07 15:21 GMT

ಉಡುಪಿ, ಆ.7: ನೇಕಾರರ ವೃತ್ತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುಂದಿನ ವರ್ಷದೊಳಗೆ 100 ಮಂದಿ ನೇಕಾರರನ್ನು ಮುಖ್ಯಭೂಮಿಕೆಗೆ ತರಲಾಗುವುದು. ನೇಕಾರರನ್ನು ಉದ್ಯಮಿಗಳನ್ನಾಗಿಸುವ ನಿಟ್ಟಿನಲ್ಲಿ ಸರಕಾರದಿಂದ ಸಿಗುವ ಸೌಲಭ್ಯ ಗಳನ್ನು ಮನೆಬಾಗಿಲಿಗೆ ಮುಟ್ಟಿಸಲು ಪ್ರಯತ್ನಿಸಲಾಗುವುದು ಎಂದು ಉಡುಪಿ ಪದ್ಮಶಾಲಿ ನೇಕಾರ ಪ್ರತಿಷ್ಠಾನ ಅಧ್ಯಕ್ಷ ರತ್ನಾಕರ್ ಇಂದ್ರಾಳಿ ಹೇಳಿದ್ದಾರೆ.

ಉಡುಪಿ ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಆಶ್ರಯದಲ್ಲಿ ಕಲ್ಯಾಣಪುರ ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದಲ್ಲಿ ರವಿವಾರ ಆಯೋಜಿಸಲಾದ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕಲ್ಯಾಣಪುರ ಶ್ರೀಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನ ಪ್ರಧಾನ ಮೊಕ್ತೇಸರ ಜ್ಯೋತಿಪ್ರಸಾದ್ ಶೆಟ್ಟಿಗಾರ್, ದೇವಸ್ಥಾನದ ಮಹಿಳಾ ವೇದಿಕೆ ಅಧ್ಯಕ್ಷೆ ಶೋಭಾ ಜ್ಯೋತಿಪ್ರಸಾದ್ ಶೆಟ್ಟಿಗಾರ್, ನಗರಸಭಾ ಉಪಾಧ್ಯಕ್ಷೆ ಲಕ್ಷ್ಮೀ ಮಂಜು ಕೊಳ, ನಗರಸಭಾ ಸದಸ್ಯ ಜಯಂತಿ ಪೂಜಾರಿ, ಕಲ್ಯಾಣಪುರ ಗ್ರಾಪಂ. ಅಧ್ಯಕ್ಷ ಕೃಷ್ಣ ದೇವಾಡಿಗ, ದಿನೇಶ್ ಪೈ, ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ ಅಧ್ಯಕ್ಷ ಎಂ.ಜಯರಾಮ್ ಮಂಗಳೂರು, ದೇವಸ್ಥಾನ ಆಡಳಿತ ಮೊಕ್ತೇಸರ ರಾಮದಾಸ್ ಶೆಟ್ಟಿಗಾರ್ ಉಪಸ್ಥಿತರಿದ್ದರು.

ಉಪಾಧ್ಯಕ್ಷ ಸದಾಶಿವ ಗೋಳಿಜೋರ ನೇಕಾರ ಪತ್ರಿಕೆಯ ಬಗ್ಗೆ ಮಾಹಿತಿ ನೀಡಿದರು. ಉಪಾಧ್ಯಕ್ಷ ಸರೋಜಾ ಯಶವಂತ್ ಶೆಟ್ಟಿಗಾರ್, ಪ್ರಧಾನ ಕೋಶಾಧಿಕಾರಿ ಶ್ರೀನಿವಾಸ್ ಶೆಟ್ಟಿಗಾರ್ ಬೈಲೂರು, ಸಹಸಂಯೋಜಕ ದೀಪಕ್ ಕುಮಾರ್ ಕಿನ್ನಿಮುಲ್ಕಿ, ಸ್ವಾತಿ ಕರುಣಾಕರ ವಕ್ವಾಡಿ ಹಾಜರಿದ್ದರು.

ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳು ಹಾಗೂ ಹಿರಿಯರನ್ನು ಈ ಸಂದರ್ಭ ಸನ್ಮಾನಿ ಸಲಾಯಿತು. ನೇಕಾರ ಬಿಂಬ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಫ್ಯಾಷನ್ ಶೋ ನಡೆಸಲಾಯಿತು.

ಪ್ರತಿಷ್ಠಾನದ ಉಪಾಧ್ಯಕ್ಷ ಮಂಜುನಾಥ ಮಣಿಪಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ದತ್ತರಾಜ್ ಸಿದ್ಧಕಟ್ಟೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನರೇಂದ್ರ ಶೆಟ್ಟಿಗಾರ್ ಹೆರ್ಗ ವಂದಿಸಿದರು. ಭವಾನಿ ಶಂಕರ್ ಹಾಗೂ ಅನುರಾಧಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News