ಮೂಳೂರು ಅಲ್ ಇಹ್ಸಾನ್‌ನಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ
ಕಾಪು, ಆ.17: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಅಧೀನದ ಅಲ್ ಇಹ್ಸಾನ್ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳ ಸಮ್ಮುಖದಲ್ಲಿ ೭೫ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ವನ್ನು ಸಂಭ್ರಮದಿಂದ ಆಚರಿಸಲಾಯಿತು.
ಧ್ವಜಾರೋಹಣವನ್ನು ಡಿಕೆಎಸ್‌ಸಿಯ ಉಪಾಧ್ಯಕ್ಷ ಕೆ.ಎಚ್.ರಫೀಕ್ ಸೂರಿಂಜೆ ನೆರವೇರಿಸಿದರು. ಅಧ್ಯಕ್ಷತೆಯನ್ನು ಡಿಕೆಎಸ್‌ಸಿಯ ಕಾರ್ಯಾಧ್ಯಕ್ಷ ಅಸ್ಸಯ್ಯದ್ ಮುಹಮ್ಮದ್ ತಂಙಳ್ ಉಚ್ಚಿಲ ವಹಿಸಿದ್ದರು. ಡಿಕೆಎಸ್‌ಸಿಯ ಕಮ್ಯುನಿಕೇಶನ್ ಕಾರ್ಯದರ್ಶಿ ಅಬ್ದುಲ್ ಹಮೀದ್ ಅರಮಿಕ್ಸ್, ಸದಸ್ಯರಾದ ಶಬೀರ್ ಅಹಮದ್, ಎಂಪ್ಲಿಟುಡ್ ಕಂಪೆನಿಯ ಜುಬೈಲ್, ಮರ್ಕಝ್ ಸಮಿತಿಯ ಲೆಕ್ಕ ಪರಿಶೋಧಕರ ಅನ್ವರ್ ಗೂಡಿನಬಳಿ, ಸಂಸ್ಥೆಯ ಮ್ಯಾನೇಜರ್ ಮೌಲಾನ ಯು.ಕೆ.ಮುಸ್ತಫಾ ಸಅದಿ ಮಾತನಾಡಿದರು.
ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಮರ್ಕಝ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಸಾಕ್ ಬೊಳ್ಳಾಯಿ, ಕಾರ್ಯದರ್ಶಿ ವೈ.ಬಿ.ಸಿ.ಬಶೀರ್ ಅಲಿ, ಸದಸ್ಯರಾದ ಎಂ.ಎಚ್.ಬಿ. ಮುಹಮ್ಮದ್, ಬದ್ರುದ್ದೀನ್ ಬಜ್ಪೆ, ಇಸ್ಮಾಯಿಲ್ ಶಾಫಿ, ನೇಜಾರು ಅಬೂಬಕ್ಕರ್, ಫಾರೂಕ್ ಸುರತ್ಕಲ್, ಉಮರ್ ಹಾಜಿ ಮುಕ್ವೆ, ಝೈನುದ್ದೀನ್ ಹಾಜಿ ಮುಕ್ವೆ, ಡಿಕೆಎಸ್‌ಸಿಯ ಸದಸ್ಯರಾದ ಹುಸೈನ್ ಕಾಟಿಪಳ್ಳ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಂಶುಪಾಲ ಹಬೀಬುರ‌್ರಹ್ಮಾನ್ ಕೆ.ಎಸ್. ಸ್ವಾಗತಿಸಿ, ಉಪ ಪ್ರಾಂಶುಪಾಲ ಅಫ್ರೀನ್ ಖಾನ್ ವಂದಿಸಿದರು. ವಿದ್ಯಾರ್ಥಿಗಳಾದ ನಫೀಸತುಲ್ ಫಾಯಿಝ, ಅಲ್ಮಾ ಆರೀಫ್ ಶೇಖ್, ಆಯಿಶಾ ಕನ್ಸಾ ಕಾರ್ಯಕ್ರಮ ನಿರೂಪಿಸಿದರು.