ಪೊಲೀಸರ ಕರ್ತವ್ಯ ಲೋಪದಿಂದಲೇ ಕೊಪ್ಪಳದ ಹುಲಿಹೈದರ್ ಗ್ರಾಮದಲ್ಲಿ ಗಲಭೆ: ಬಹುತ್ವ ಕರ್ನಾಟಕ ಆರೋಪ

Update: 2022-08-19 12:08 GMT

ಬೆಂಗಳೂರು, ಆ.19: ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ದಲಿತರಿಗೆ ಬೆದರಿಕೆ ಇದೆ ಎಂದು ಸಣ್ಣಹನುಮಂತ ಆ.1ರಂದು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದರು. ಆದರೆ ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆಯು ಯಾವುದೇ ಮುಂಜಾಗೃತ ಕ್ರಮ ತೆಗೆದುಕೊಂಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಗಮನ ವಹಿಸದೇ ಇರುವ ಕಾರಣ ಇಬ್ಬರ ಹತ್ಯೆ, ಆಸ್ತಿಗೆ ಹಾನಿಯಾಗಿದೆ ಎಂದು ಬಹುತ್ವ ಕರ್ನಾಟಕ ಆರೋಪಿಸಿದೆ.  

ಹುಲಿಹೈದರ್ ಗ್ರಾಮದಲ್ಲಿ ಆ.11ರಂದು ಪಾಷಾ ವಲಿ ಮತ್ತು ಯಂಕಪ್ಪ ತಳವಾರ ಅವರನ್ನು ಕೊಲೆ ಮಾಡಲಾಗಿದೆ. ಸರಕಾರವು ಇವರ ಅವಲಂಬಿತರಿಗೆ ಪರಿಹಾರವನ್ನು ನೀಡಬೇಕು. ಹಾಗೆಯೇ ಗಲಭೆಯಲ್ಲಿ ತೀವ್ರತರವಾದ ಗಾಯಗೊಂಡ ಧರ್ಮರಾಜ್‍ಗೆ ಚಿಕಿತ್ಸೆ ವೆಚ್ಚವನ್ನು ನೀಡಬೇಕು ಎಂದು ಬಹುತ್ವ ಕರ್ನಾಟಕ ಆಗ್ರಹಿಸಿದೆ.

ಹಾಗೆಯೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಲಿಹೈದರ್ ಹಳ್ಳಿಯ ಸಣ್ಣಹನುಮಂತ ಸೇರಿ ಮತ್ತಿತರ ಮೇಲೆ ಆರೋಪ ಮಾಡಿ ಅಪರಾಧ ಪ್ರಕರಣದಲ್ಲಿ ಸಿಕ್ಕಿಸಲಾಗಿದೆ. ಅವರ ಮೇಲಿರುವ ಆರೋಪಗಳನ್ನು ಕೈಬಿಡಬೇಕು. ಹಾಗೆಯೇ ಗ್ರಾಮದಲ್ಲಿ ನಡೆದ ಕೊಲೆ ಹಿಂಸಾಚಾರವನ್ನು ಸಮಗ್ರ ತನಿಖೆಯನ್ನು ನಡೆಸಬೇಕು ಎಂದು ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News