​ಮುಂಬೈ-ಮಂಗಳೂರು ಜಂಕ್ಷನ್ ನಡುವೆ ಸಾಪ್ತಾಹಿಕ ವಿಶೇಷ ಎಸಿ ರೈಲು

Update: 2022-08-22 13:46 GMT
ಸಾಂದರ್ಭಿಕ ಚಿತ್ರ 

ಉಡುಪಿ(Udupi), ಆ.22: ಗಣೇಶ ಚತುರ್ಥಿ ಹಬ್ಬದ ಜನರ ನೂಕುನುಗ್ಗುಲನ್ನು ನಿಭಾಯಿಸುವ ಸಲುವಾಗಿ ಕೇಂದ್ರ ರೈಲ್ವೇಸ್‌ನ ಸಹಯೋಗದೊಂದಿಗೆ ಮುಂಬಯಿ ಲೋಕಮಾನ್ಯ ತಿಲಕ್ ಹಾಗೂ ಮಂಗಳೂರು(Mangaluru) ಜಂಕ್ಷನ್ ನಡುವೆ ಹೆಚ್ಚುವರಿ ಸಾಪ್ತಾಹಿಕ ಗಣೇಶ ವಿಶೇಷ ರೈಲನ್ನು ಓಡಿಸಲು ಕೊಂಕಣ ರೈಲ್ವೆ ನಿರ್ಧರಿಸಿದೆ.

ರೈಲು ನಂ.01173 ಲೋಕಮಾನ್ಯ ತಿಲಕ್-ಮಂಗಳೂರು ಜಂಕ್ಷನ್ ಎಸಿ ಸಾಪ್ತಾಹಿಕ ವಿಶೇಷ ರೈಲು ಆ.24, ಆ.31 ಹಾಗೂ ಸೆ.7ರ ಬುಧವಾರದಂದು ರಾತ್ರಿ 8:50ಕ್ಕೆ ಲೋಕಮಾನ್ಯ ತಿಲಕ್‌ನಿಂದ ನಿರ್ಗಮಿಸಲಿದ್ದು, ಮರುದಿನ 5:05ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.

ರೈಲು ನಂ.01174 ಮಂಗಳೂರು ಜಂಕ್ಷನ್-ಲೋಕಮಾನ್ಯ ತಿಲಕ್ ಎಸಿ ಸಾಪ್ತಾಹಿಕ ವಿಶೇಷ ರೈಲು ಆ.25, ಸೆ.1 ಹಾಗೂ ಸೆ.8ರ ಗುರುವಾರ ರಾತ್ರಿ 8:15ಕ್ಕೆ ಮಂಗಳೂರು ಜಂಕ್ಷನ್‌ನಿಂದ ಪ್ರಯಾಣ ಬೆಳೆಸಲಿದ್ದು, ಮರುದಿನ ಸಂಜೆ 5:30ಕ್ಕೆ ಲೋಕಮಾನ್ಯ ತಿಲಕ್ ನಿಲ್ದಾಣ ತಲುಪಲಿದೆ.

ವಾರ್ತಾಭಾರತಿಯ ನ್ಯೂಸ್ ಅಪ್ಡೇಟ್ಸ್ ನಿಮ್ಮ ವಾಟ್ಸ್ ಆಪ್ ಗೆ  ತಲುಪಬೇಕೇ ? ಈ ಲಿಂಕ್ https://bit.ly/3Cd3adz ಕ್ಲಿಕ್ ಮಾಡಿ ನಮ್ಮ ಗ್ರೂಪ್ Join ಆಗಿ.

ಈ ರೈಲಿಗೆ ಥಾಣೆ, ಪನ್ವೇಲ್, ರೋಹಾ, ಮಂಗಾವ್, ಖೇಡ್, ಚಿಪ್ಳುಣ್, ಸರ್ವಾದ, ಸಂಗಮೇಶ್ವರ ರೋಡ್, ರತ್ನಗಿರಿ, ಅಡಾವಳಿ, ವಿಲೆವಾಡೆ, ರಾಜಪುರ್ ರೋಡ್, ಕಂಕವಳ್ಳಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರೋಡ್, ತೀವಂ, ಕರ್ಮಾಲಿ, ಮಡಗಾಂವ್ ಜಂಕ್ಷನ್, ಕಾಣಕೋನ, ಕಾರವಾರ, ಅಂಕೋಲ, ಗೋಕರ್ಣ ರೋಡ್, ಕುಮಟಾ, ಹೊನ್ನಾವರ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ ಹಾಗೂ ಸುರತ್ಕಲ್ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.

ಈ ರೈಲು ಒಟ್ಟು 22 ಕೋಚ್‌ಗಳನ್ನು ಹೊಂದಿರುತ್ತದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News