ಹೋಗೋದು ಬೇಡ ಅಂತ ನಮ್ಮವರಿಗೆ ಹೇಳ್ತೀನಿ, ಅವರೂ ಹೇಳಲಿ: ಸಿದ್ದರಾಮಯ್ಯಗೆ ಕೊಡಗು ಚಲೋ ಕೈ ಬಿಡುವಂತೆ ಬಿಎಸ್ ವೈ ಮನವಿ

Update: 2022-08-23 08:10 GMT

ಮೈಸೂರು: ಇತ್ತೀಚೆಗೆ ಮಳೆಹಾನಿ ಪೀಡಿತ ಪ್ರದೇಶಗಳನ್ನು ವೀಕ್ಷಿಸಲು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ವಿಧಾನಸಭೆ ವಿಪಕ್ಷ ನಾಯಕ  ಸಿದ್ದರಾಮಯ್ಯ (Siddaramaiah) ಅವರ ಕಾರಿಗೆ ಮೊಟ್ಟೆ ಎಸೆದ ಘಟನೆಯನ್ನು ಖಂಡಿಸಿ ಕಾಂಗ್ರೆಸ್ ಆ. 26ರಂದು ಹಮ್ಮಿಕೊಂಡಿದ್ದ  ಕೊಡಗು ಚಲೋ ಕಾರ್ಯಕ್ರಮ ಕುರಿತು ಮಾಜಿ ಮುಖ್ಯಂತ್ರಿ ಬಿ.ಎಸ್ ಯಡಿಯೂರಪ್ಪ (B. S. Yediyurappa) ಪ್ರತಿಕ್ರಿಯಿಸಿದ್ದಾರೆ. 

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕೊಡಗಿಗೆ ಹೋಗಿ ಗೊಂದಲ ಉಂಟು ಮಾಡುವ  ಅವರ ಉದ್ದೇಶ ಏನು ಅಂತ ನನಗೆ ಅರ್ಥ ಆಗುತ್ತಿಲ್ಲ. ನಾನು ನಮ್ಮವರಿಗೆ ಬೇಕಾದರೆ ಯಾರೂ ಹೋಗೋದು ಬೇಡ ಅಂತ ಹೇಳ್ತೇನೆ. ಅವರೂ ಹೇಳಲಿ' ಎಂದು ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು. 

' ಶಾಂತಿಯುತ ವಾತಾವರಣ ಇರುವ ಸಂದರ್ಭದಲ್ಲಿ ಯಾವ ಕಾರ್ಯಕ್ರಮ ಬೇಕಾದರೂ ಮಾಡಲಿ, ಈಗ ಅವರು ಗೊಂದಲ ಉಂಟು ಮಾಡುವ, ಕೆಲಸ ಸಿದ್ದರಾಮಯ್ಯ ಅವರು ಮಾಡಬಾರದು ಎಂದು ವಿನಂತಿ ಮಾಡಿಕೊಳ್ಳುತ್ತಿದ್ದೇನೆ' ಎಂದು ತಿಳಿಸಿದರು. 

ಇದನ್ನೂ ಓದಿ:  ಕಾಂಗ್ರೆಸ್- ಬಿಜೆಪಿ ಸಮಾವೇಶ ಹಿನ್ನೆಲೆ: ಆಗಸ್ಟ್ 24ರಿಂದ 27ರ ವರೆಗೆ ಕೊಡಗು ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News