ನಿಷೇಧಾಜ್ಞೆ ಪಾಲಿಸ್ತೀವಿ, ಆಗಸ್ಟ್ 26ಕ್ಕೆ 'ಕೊಡಗು ಚಲೋ' ಇಲ್ಲ: ಸಿದ್ದರಾಮಯ್ಯ
ಬೆಂಗಳೂರು: 'ಇತ್ತೀಚೆಗೆ ಮಳೆಹಾನಿ ಪೀಡಿತ ಪ್ರದೇಶಗಳನ್ನು ವೀಕ್ಷಿಸಲು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ತಮ್ಮ ಕಾರಿನ ಮೇಲೆ ಮೊಟ್ಟೆ ಎಸೆದ ಘಟನೆಯನ್ನು ಖಂಡಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಕೊಡಗು ಪ್ರತಿಭಟನಾ ರ‍್ಯಾಲಿಯನ್ನು ಮುಂದೂಡಲಾಗಿದೆ' ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.
ಮಡಿಕೇರಿ ಚಲೋ ಮಾಡಲು ಜಿಲ್ಲಾಧಿಕಾರಿ,' ಎಸ್‌ಪಿ ಅನುಮತಿ ಕೊಟ್ಟಿಲ್ಲ. ಈ ಸಂಬಂಧ ಪಕ್ಷದ ಶಾಸಕರು, ಅಧ್ಯಕ್ಷರ ಜೊತೆ ಚರ್ಚಿಸಿ ತೀರ್ಮಾನ ಮಾಡಿದ್ದೇವೆ. ಮಡಿಕೇರಿ ಚಲೋ ಮುಂದೂಡುತ್ತೇವೆ. ಕಾನೂನು ಉಲ್ಲಂಘನೆ ಮಾಡಲ್ಲ' ಎಂದು ತಿಳಿಸಿದರು.
'ಜಿಲ್ಲಾಧಿಕಾರಿ ಅವರ ಆದೇಶ ಅಂದರೆ ಅದು ಸರ್ಕಾರದ ಆದೇಶ. ನಾವು ಪಾಲಿಸುತ್ತೇವೆ, ದಾವಣಗೆರೆಯಲ್ಲಿ ಕಾರ್ಯಕ್ರಮ ಆದ ಮೇಲೆ ಬಿಜೆಪಿಯವರಿಗೆಲ್ಲ ಹೊಟ್ಟೆ ಉರಿ ಶುರುವಾಗಿದೆ. ಅದಕ್ಕೆ ಅವರು ಸಾವರ್ಕರ್, ಗೋಡ್ಸೆಯನ್ನು ಎಳೆದು ತರುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹೋಗೋದು ಬೇಡ ಅಂತ ನಮ್ಮವರಿಗೆ ಹೇಳ್ತೀನಿ, ಅವರೂ ಹೇಳಲಿ: ಸಿದ್ದರಾಮಯ್ಯಗೆ ಕೊಡಗು ಚಲೋ ಕೈ ಬಿಡುವಂತೆ ಬಿಎಸ್ ವೈ ಮನವಿ