ಮುಂಬೈ-ತೋಕೂರು ವಿಶೇಷ ರೈಲು ಮಂಗಳೂರು ಜಂಕ್ಷನ್‌ವರೆಗೆ ವಿಸ್ತರಣೆ

Update: 2022-08-26 13:07 GMT
ಸಾಂದರ್ಭಿಕ ಚಿತ್ರ

ಉಡುಪಿ, ಆ.26: ಮುಂಬೈಯ ಲೋಕಮಾನ್ಯ ತಿಲಕ್ ಹಾಗೂ ತೋಕೂರು ನಡುವೆ ಸಂಚರಿಸುವ ರೈಲು ನಂ. 01153/01154 ದೈನಂದಿನ ವಿಶೇಷ ರೈಲಿನ ಸಂಚಾರವನ್ನು ಗಣೇಶ ಚೌತಿಯ ಸಂದರ್ಭದಲ್ಲಿ ಜನರ ವಿಶೇಷ ಬೇಡಿಕೆಯಂತೆ ಮಂಗಳೂರು ಜಂಕ್ಷನ್‌ವರೆಗೆ ವಿಸ್ತರಿಸಲಾಗಿದೆ. 

ರೈಲು ನಂ.01153 ಮುಂಬೈ ಲೋಕಮಾನ್ಯ ತಿಲಕ್-ತೋಕೂರು ದೈನಂದಿನ ವಿಶೇಷ ರೈಲು ಆ.28, 29, 30, ಸೆ.1, 2, 3ರಂದು ರಾತ್ರಿ 10.15ಕ್ಕೆ ಮುಂಬೈಯಿಂದ ನಿರ್ಗಮಿಸಲಿದ್ದು, ಮರುದಿನ ಸಂಜೆ 5.05ಕ್ಕೆ ತೋಕೂರು ಬದಲು ಮಂಗಳೂರು ಜಂಕ್ಷನ್ ತಲುಪಲಿದೆ.

ಅದೇ ರೀತಿ ರೈಲು ನಂ.01154 ತೋಕೂರು- ಲೋಕಮಾನ್ಯ ತಿಲಕ್ ದೈನಂದಿನ ವಿಶೇಷ ರೈಲು ಆ.29, 30, 31, ಸೆ.2, 3, 4ರಂದು ಸಂಜೆ 6.45ಕ್ಕೆ ಮಂಗಳೂರು ಜಂಕ್ಷನ್‌ನಿಂದ ಪ್ರಯಾಣ ಬೆಳೆಸಲಿದ್ದು, ಮರುದಿನ ಅಪರಾಹ್ನ 1.25ಕ್ಕೆ ಲೋಕಮಾನ್ಯ ತಿಲಕ್ ನಿಲ್ದಾಣ ತಲುಪಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News