ಕೊಪ್ಪಳ: ಇಬ್ಬರು ಪೊಲೀಸರು ನೀರುಪಾಲು
Update: 2022-09-06 12:00 GMT
ಕೊಪ್ಪಳ: ಬಂದೋಬಸ್ತ್ ಕೆಲಸಕ್ಕೆ ಗದಗ ಜಿಲ್ಲೆ ಗಜೇಂದ್ರಗಡಕ್ಕೆ ಬಂದೋಬಸ್ತ್ಗೆ ತೆರಳಿದ್ದ ಇಬ್ಬರು ಪೊಲೀಸ್ ಕಾನ್ಸ್ ಟೆಬಲ್ಗಳು ಹಳ್ಳದಲ್ಲಿ ಕೊಚ್ಚಿಹೋಗಿದ್ದು, ಓರ್ವ ಪೊಲೀಸ್ ಸಿಬ್ಬಂದಿಯ ಮೃತದೇಹ ಪತ್ತೆಯಾಗಿದೆ.
ಮುಂಡರಗಿ ಪೊಲೀಸ್ ಠಾಣೆಯ ಕಾನ್ಸ್ ಟೆಬಲ್ ಗಳಾದ ಮಹೇಶ್ ವಕ್ಕರದ ಮತ್ತು ನಿಂಗಪ್ಪ ಹಲವಾಗಲಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಕೊಪ್ಪಳ, ಗದಗ ಜಿಲ್ಲೆಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಳಿಗ್ಗೆಯಿಂದಲೇ ಅವರಿಗಾಗಿ ಹುಡುಕಾಟ ನಡೆಸಿದ್ದರು.
ಇಂದು (ಮಂಗಳವಾರ) ಮಧ್ಯಾಹ್ನ ನಿಂಗಪ್ಪ ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಸೋಮವಾರ ಬಂದೋಬಸ್ತ್ ಕೆಲಸಕ್ಕೆ ಮುಂಡರಗಿಯಿಂದ ಒಟ್ಟು ಎಂಟು ಜನ ಸಿಬ್ಬಂದಿ ತೆರಳಿದ್ದರು. ಅದರಲ್ಲಿ ಇಬ್ಬರು ನಾಪತ್ತೆಯಾಗಿದ್ದರು ಎನ್ನಲಾಗಿದೆ.