ಏಶ್ಯಕಪ್ ಫೈನಲ್: ಪಾಕಿಸ್ತಾನ ಗೆಲುವಿಗೆ 171 ರನ್ ಗುರಿ ನೀಡಿದ ಶ್ರೀಲಂಕಾ

Update: 2022-09-11 15:59 GMT

  ದುಬೈ, ಸೆ.11: ಏಶ್ಯಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನ ತಂಡದ ಗೆಲುವಿಗೆ 171 ರನ್ ಗುರಿ ನೀಡಿದೆ.

  ರವಿವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ ಭಾನುಕಾ ರಾಜಪಕ್ಸ (ಔಟಾಗದೆ 71 ರನ್, 45 ಎಸೆತ, 6 ಬೌಂಡರಿ, 3 ಸಿಕ್ಸರ್) ಅವರ ಅರ್ಧಶತಕದ ಕೊಡುಗೆಯ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿದೆ.

ಶ್ರೀಲಂಕಾದ ಆರಂಭ ಉತ್ತಮವಾಗಿರಲಿಲ್ಲ. 3.2 ಓವರ್‌ಗಳಲ್ಲಿ ಕುಶಾಲ್ ಮೆಂಡಿಸ್ ಹಾಗೂ ನಿಶಾಂಕ ವಿಕೆಟನ್ನು ಕಳೆದುಕೊಂಡಿತು. ಮೆಂಡಿಸ್ ಇನಿಂಗ್ಸ್‌ನ ಮೊದಲ ಓವರ್‌ನ 3ನೇ ಎಸೆತದಲ್ಲಿ ಹಾರಿಸ್ ರವೂಫ್‌ಗೆ ವಿಕೆಟ್ ಒಪ್ಪಿಸಿದರು.

ಲಂಕೆಯ ಪರ ರಾಜಪಕ್ಸ ಸರ್ವಾಧಿಕ ಸ್ಕೋರ್ ಗಳಿಸಿದರೆ, ವನಿಂದು ಹಸರಂಗ(36 ರನ್)ಹಾಗೂ ಧನಂಜಯ ಡಿಸಿಲ್ವಾ(28 ರನ್)ಹಾಗೂ ಕರುಣರತ್ನೆ(14) ಎರಡಂಕೆಯ ಸ್ಕೋರ್ ಗಳಿಸಿದರು.
ಹಾರಿಸ್ ರವೂಫ್(3-29)ಯಶಸ್ವಿ ಪ್ರದರ್ಶನ ನೀಡಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News