ವಿಪಕ್ಷ ನಾಯಕರ ವಿರುದ್ದ ಸಿ.ಟಿ. ರವಿ ಪದಬಳಕೆ ಸರಿಯಲ್ಲ: ಎಚ್.ವಿಶ್ವನಾಥ್ ಆಕ್ಷೇಪ

Update: 2022-09-12 13:54 GMT

ಬೆಂಗಳೂರು, ಸೆ. 12: ‘ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ‘ಕಚ್ಚೆಹರುಕ' ಎಂಬ ಪದ ಬಳಕೆ ಮಾಡಿರುವುದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ' ಎಂದು ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಕ್ಷೇಪಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಎರಡೂ ರಾಷ್ಟ್ರೀಯ ಪಕ್ಷಗಳು ಧಮ್ ಇದೆಯೇ? ತಾಕತ್ತು ಇದೆಯಾ? ಎಂಬ ಪದ ಬಳಕೆ ಮಾಡುತ್ತಿದ್ದಾರೆ. ಕನ್ನಡ ಭಾಷೆಯನ್ನೇ ಕುಲಕೆಡಿಸುತ್ತಿದ್ದಾರೆ. ರಾಜಕಾರಣಿಗಳು ಮಾತನಾಡುವಾಗ ಬಳಸುವ ಪದಗಳನ್ನು ಎಚ್ಚರದಿಂದ ಬಳಸಬೇಕು' ಎಂದು ಸಲಹೆ ನೀಡಿದರು.

‘ಬೇರೆಯವರನ್ನು ಸಂಸ್ಕೃತಿ ಹೀನ ಎಂದು ಹೇಳುತ್ತಾ ನಮ್ಮ ಮಾತುಗಳು ಸಂಸ್ಕೃತಿ ಹೀನವಾಗಿರುವುದನ್ನು ನಾಡಿನ ಜನರು ಗಮನಿಸುತ್ತಿದ್ದಾರೆ ಎಂಬ ಎಚ್ಚರಿಕೆ ಇರಬೇಕು. ವಿಶ್ವನಾಥ್ ಮತ್ತು ಸಿದ್ದರಾಮಯ್ಯನವರನ್ನು ಒಂದೇ ರಕ್ತವಾದರೆ, ಸಿ.ಟಿ.ರವಿ ಅವರು ಮನುಷ್ಯರೇ ಅಲ್ಲವೇ? ಮಾತನಾಡುವ ಭರದಲ್ಲಿ ಏನೇನೋ ಮಾತಾಡಬಾರದು' ಎಂದು ವಿಶ್ವನಾಥ್ ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News