ಮುಂಬೈ ಇಂಡಿಯನ್ಸ್ ಹೊಸ ಮುಖ್ಯ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್ ಕೀಪರ್ ಮಾರ್ಕ್ ಬೌಚರ್ ನೇಮಕ

Update: 2022-09-16 06:00 GMT
Photo:twitter

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ಆವೃತ್ತಿಗೆ   ತನ್ನ ಹೊಸ ಮುಖ್ಯ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ಮಾರ್ಕ್ ಬೌಚರ್  (former South Africa wicketkeeper-batter Mark Boucher)ನೇಮಕವನ್ನು ಮುಂಬೈ ಇಂಡಿಯನ್ಸ್  (Mumbai Indians )ಶುಕ್ರವಾರ ದೃಢಪಡಿಸಿದೆ.

ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಂತರ ಪುರುಷರ ಹಿರಿಯ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಬೌಚರ್ ಕೆಳಗಿಳಿಯುತ್ತಿರುವುದಾಗಿ ಈ ವಾರದ ಆರಂಭದಲ್ಲಿ ಕ್ರಿಕೆಟ್ ಸೌತ್ ಆಫ್ರಿಕಾ (CSA) ದೃಢಪಡಿಸಿತ್ತು.

ಬೌಚರ್ ಅವರು ವಿಕೆಟ್-ಕೀಪರ್, ಬ್ಯಾಟ್ಸ್‌ಮನ್ ಆಗಿ ಸುದೀರ್ಘ ಹಾಗೂ  ಸುಪ್ರಸಿದ್ಧ ವೃತ್ತಿಜೀವನವನ್ನು ಕಂಡಿದ್ದಾರೆ ಹಾಗೂ  ಟೆಸ್ಟ್ ಕ್ರಿಕೆಟ್ ನಲ್ಲಿ ವಿಕೆಟ್-ಕೀಪರ್‌ ಆಗಿ ಅತಿ ಹೆಚ್ಚು ಬ್ಯಾಟರ್ ಗಳನ್ನು  ಔಟ್ ಮಾಡಿದ ದಾಖಲೆಯನ್ನು ಹೊಂದಿದ್ದಾರೆ. ನಿವೃತ್ತಿಯ ನಂತರ ಅವರು ದಕ್ಷಿಣ ಆಫ್ರಿಕಾದ ಪ್ರಮುಖ ಕ್ರಿಕೆಟ್ ಫ್ರಾಂಚೈಸಿಯಾದ ಟೈಟಾನ್ಸ್‌  ತರಬೇತುದಾರರಾಗಿ ಅಧಿಕಾರ ವಹಿಸಿಕೊಂಡಿದ್ದರು. ಟೈಟಾನ್ಸ್ ತಂಡವು ಐದು ದೇಶೀಯ ಪ್ರಶಸ್ತಿ ಗೆಲ್ಲಲು  ಕಾರಣರಾಗಿದ್ದರು.

2019 ರಲ್ಲಿ  ಕ್ರಿಕೆಟ್ ದಕ್ಷಿಣ ಆಫ್ರಿಕಾವು ಮಾರ್ಕ್ ಬೌಚರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿತು, ಬೌಚರ್ ಕೋಚಿಂಗ್ ನಲ್ಲಿ ಆಫ್ರಿಕಾವು  11 ಟೆಸ್ಟ್ 12 ಏಕದಿನ ಹಾಗೂ  23 ಟಿ-20 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News