ನಂಜನಗೂಡು: ಹಾಡಹಗಲೇ ಮಹಿಳೆಯನ್ನು ಕಟ್ಟಿ ಹಾಕಿ ಮನೆಯಲ್ಲಿದ್ದ ಚಿನ್ನಾಭರಣ ದರೋಡೆ; ದೂರು ದಾಖಲು
Update: 2022-09-17 12:35 GMT
ಮೈಸೂರು,ಸೆ.17: ಬೆಳ್ಳಂಬೆಳಿಗ್ಗೆಯೇ ಮೊಬೈಲ್ ಪಾರ್ಸೆಲ್ ನೀಡುವುದಾಗಿ ಬಂದ ದುಷ್ಕರ್ಮಿಗಳು ಮನೆಯೊಳಗೆ ನುಗ್ಗಿ ಮಹಿಳೆಯನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಲ್ಲದೆ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿ ದರೋಡೆ ನಡೆಸಿರುವ ಘಟನೆ ನಂಜನಗೂಡು ನಗರದ ರಾಮಸ್ವಾಮಿ ಲೇಔಟ್ ನಲ್ಲಿ ನಡೆದದೆ.
ಪ್ರೌಢಶಾಲಾ ಶಿಕ್ಷಕ ಶಂಭುಲಿಂಗ ಅವರ ಮವನೆಯಲ್ಲಿ ಈ ದರೋಡೆ ನಡೆದಿದ್ದು, ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿದ ಅಪರಿಚಿತರ ತಂಡ ನಿಮಗೊಂದು ಪಾರ್ಸೆಲ್ ಇದೆ ಎಂದು ಹೇಳಿಕೊಂಡು ಏಕಾ ಏಕಿ ಮನೆಗೆ ನುಗ್ಗಿ ಮಹಿಳೆಗೆ ಬೆದರಿಸಿ, ಕೈಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್ ಅಂಟಿಸಿ ಮನೆಯಲ್ಲಿದ್ದ ಚಿನ್ನಾಭರಣ ದರೋಡೆ ನಡೆಸಿದ್ದಾರೆ ಎನ್ನಲಾಗಿದೆ.
ಮಹಿಳೆಯ ಬಳಿಯಿದ್ದ ಮಾಂಗಲ್ಯ ಸೇರಿ ಒಟ್ಟು 175 ಗ್ರಾಂ ಚಿನ್ನಾಭರಣ ದರೋಡೆ ನಡೆಸಿ ದೋಚಿದ್ದಾರೆ. ಮುಸುಕು ಹಾಕಿಕೊಂಡು ಬಂದಿದ್ದ ಮೂವರು ಈ ಕೃತ್ಯ ಎಸಗಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾರೆ.
ಈ ಸಂಬಂಧ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.