ಹನೂರು | ಹಸು ಮೇಯಿಸಲು ತೆರಳಿದ್ದ ರೈತ ಚಿರತೆ ದಾಳಿಗೆ ಬಲಿ
Update: 2022-09-23 06:22 GMT
ಬೆಂಗಳೂರು, ಸೆ.23: ಹಸು ಮೇಯಿಸಲು ತೆರಳಿದ್ದ ರೈತನೋರ್ವ ಸೇರಿದಂತೆ ಮೇಕೆಯೊಂದನ್ನು ಚಿರತೆ ಬಲಿ ತೆಗೆದುಕೂಂಡಿರುವ ಘಟನೆ ಹನೂರು ತಾಲೂಕಿನ ಕೆವಿಎನ್ ದೊಡ್ಡಿ ಗ್ರಾಮದಲ್ಲಿ ನಡೆದಿದ್ದು, ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಕೆವಿಎನ್ ದೊಡ್ಡಿ ಗ್ರಾಮದ ಗೋವಿಂದಯ್ಯ (65) ಚಿರತೆ ದಾಳಿಯಿಂದ ಮೃತಪಟ್ಟ ರೈತ. ಇವರು ಗುರುವಾರ ಹಸು ಮೇಯಿಸಲು ತೆರಳಿದ್ದವರು ನಾಪತ್ತೆಯಾಗಿದ್ದರು. ಇಂದು ಬೆಳಗ್ಗೆ ಹುಡುಕಾಡಿದಾಗ ಚಿರತೆ ದಾಳಿಯಿಂದ ಜರ್ಜರಿತವಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅಲ್ಲದೆ ಚಿರತೆಯು ಮೇಕೆಯೊಂದನ್ನು ಕೂಡಾ ಕೊಂದು ತಿಂದಿದೆ.
ನರಭಕ್ಷಕ ಚಿರತೆಯಿಂದಾಗಿ ಈ ಭಾಗದ ಜನರು ಆತಂಕಕ್ಕೀಡಾಗಿದ್ದು, ಚಿರತೆ ಸೆರೆ ಹಿಡಿಯಲು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ರೈತ ಮುಖಂಡರು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.