ರಾಹುಲ್ ಗಾಂಧಿ ಹೋದಲ್ಲೆಲ್ಲಾ ಕಮಲ ಅರಳಿದೆ: ಸಿಎಂ ಬಸವರಾಜ ಬೊಮ್ಮಾಯಿ

Update: 2022-09-25 12:28 GMT

ಮೈಸೂರು: 'ರಾಹುಲ್ ಗಾಂಧಿ ಹೋದಲ್ಲೆಲ್ಲಾ ಕಮಲ ಅರಳಿದೆ' ಎಂದು ಭಾರತ್ ಜೋಡೋ ಪಾದಯಾತ್ರೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ. 

ದಸರಾ ಉದ್ಘಾಟನಗೆ ರವಿವಾರ ಮೈಸೂರಿಗ ವಿಶೇಷ ವಿಮಾನದ ಮೂಲಕ ಪತ್ನಿ ಸಮೇತ ಆಗಮಿಸಿದ ಅವರು ಮಂಡಕಳ್ಳಿ ವಿಮಾನ‌ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆ ಮಾಡಲಿ. ಅವರು ಈ ಹಿಂದೆ ಯಾವ ಯಾವ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಂಡಿದ್ದರೊ ಅಲ್ಲೆಲ್ಲಾ ಕಮಲ ಅರಳಿದೆ ಎಂದು ಹೇಳಿದರು.

ಕಾಂಗ್ರೆಸ್ ಅದಪತಃನದ ಹಾದಿಯಲ್ಲಿದೆ. ಅವರ ತಟ್ಟೆಯಲ್ಲೇ ಕತ್ತೆಗಳಷ್ಟು ಸರಣಿ ಹಗರಣ ಇಟ್ಟುಕೊಂಡು ಬಿಜೆಪಿ ಬಗ್ಗೆ ಪೇ ಸಿಎಂ ಅಭಿಯಾನ ಮಾಡುತ್ತಿದ್ದಾರೆ ಇದಕ್ಕೆ ನಾನು ಸ್ವಾಗತ ಮಾಡುತ್ತೇನೆ ಎಂದು ಹೇಳಿದರು.

ಭ್ರಷ್ಟಾಚಾರದ ಆರೋಪಮಾಡುವ ಕಾಂಗ್ರೆಸ್ ನವರಿಗೆ ಸದನ ಕರೆದು ಆರೋಪದ ಬಗ್ಗೆ ಒಂದೇ ಒಂದು ದಾಖಲೆ ಕೊಡಿ ಎಂದೆ ಆದರೆ ಅವರ ಬಳಿ ಸರಕು ಇಲ್ಲದೆ ಸದನವನ್ನು ಹಾಳುಮಾಡಿದರು. ಹಾಗಾಗಿ ಚುನಾವಣೆಗೆ ಹೋಗಬೇಕಾಗಿರುವುದರಿಂದ ಸುಮ್ಮನೆ ಪೇ ಸಿಎಂ ಅನ್ನೋ ಆರೋಪ ಮಾಡುತ್ತಿದ್ದಾರೆ.‌ನಾನು ಯಾವ ಭ್ರಷ್ಟಾಚಾರದಲ್ಲಿ ತೊಡಗಿದ್ದೇನೆ ಎಂದು ಸಾಭೀತು ಪಡಿಸಲಿ ಎಂದು ಮತ್ತೊಮ್ಮೆ ಸವಾಲು ಹಾಕಿದರು.

ನಾನು ಜಾತಿ ಆಧಾರದಲ್ಲಿ ಎಂದೂ ರಾಜಕಾರಣ ಮಾಡಿಲ್ಲ, ಇವರು ಪೇ ಸಿಎಂ ಎಂದು ಹೇಳಿದ್ದರಿಂದ ಕೆಲವರ ಮನಸ್ಸಿಗೆ ನೋವಾಗಿ ಜಾತಿ ವಿಚಾರ ಪ್ರಸ್ತಾಪಿಸಿದ್ದಾರೆ.‌ ನಾನಾಂತೂ ಎಂದೂ ಜಾತಿ ರಾಜಕಾರಣ ಮಾಡುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಆರೋಗ್ಯ ಇಲಾಖೆಯ 108 ಆಂಬುಲೆನ್ಸ್ ತಾಂತ್ರಿಕ ಕಾರಣಗಳಿಂದ ತೊಂದರೆಯಾಗಿದೆ. ಇದನ್ನು ಕೂಡಲೇ ಸರಿಪಡಿಸುವಂತೆ ಸೂಚಿಸಿದ್ದೇನೆ. ಆರೋಗ್ಯ ಸಚಿವರು ನನ್ನ ಜೊತೆ ಇದ್ದು ಎಲ್ಲಾ ಸರಿಪಡಿಸಲು ಕ್ರಮವಹಿಸುತೊದ್ದಾರೆ.  ಮದರ್ ಬೋಡ್೯ ಕೆಟ್ಟಿದ್ದರಿಂದ ರಾಜ್ಯಾದ್ಯಂತ ತೊಂದರೆಯಾಗಿತ್ತು ಅಧಿಕಾರಿಗಾಳು ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ಹೇಳಿದರು.

ದಸರಾ ನಾಡಹಬ್ಬವೂ ಹೌದು ದಸರಾ ಆಚರಣೆಯೂ ಹೌದು. ಹಾಗಾಗಿ ಈ ಬಾರಿ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ದೇಶದ ರಾಷ್ಟ್ರಪತಿಗಳು ದಸರಾ ಉದ್ಘಾಟನೆ ಮಾಡುತ್ತಿರುವುದು ಹೆಮ್ಮೆ ತಂದಿದೆ ಎಂದು ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News