ರೈತ ಸಂಘದಿಂದ 'Payfarmer' ಅಭಿಯಾನ

Update: 2022-09-25 13:10 GMT

ಮಂಡ್ಯ,  ಸೆ.2: ರಾಜ್ಯದಲ್ಲಿ 'ಪೇಸಿಎಂ' ವಿಚಾರವಾಗಿ ಬಿಜೆಪಿ-ಕಾಂಗ್ರೆಸ್ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿದೆ. ಈ ವಿಚಾರಕ್ಕೆ ರಾಷ್ಟ್ರೀಯ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ರಾಜ್ಯ ರೈತ ಸಂಘ  ಇದೀಗ 'ಪೇ – ಫಾರ್ಮರ್' ಅಭಿಯಾನ ಆರಂಭಿಸಿದೆ. 

ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ, ಆರ್ಗ್ಯಾನಿಕ್​ ಮಂಡ್ಯ ಸಂಸ್ಥೆಯ ಸಂಸ್ಥಾಪಕ, ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಹೋರಾಟ ಸಮಿತಿ ಅಧ್ಯಕ್ಷ ಎಸ್​.ಸಿ. ಮಂಧುಚಂದನ್​ ಅವರು ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಪೇ – ಫಾರ್ಮರ್ ಪೋಸ್ಟರ್​ ಹಾಕಿ ಟನ್ ಕಬ್ಬಿಗೆ 4500 ರೂ‌. ನಿಗದಿ ಮಾಡಿ ಎಂದು ಆಗ್ರಹಿಸಿದ್ದಾರೆ.

'ರಾಷ್ಟ್ರೀಯ ಪಕ್ಷಗಳ ನಾಯಕರೇ ನೀವೆಲ್ಲ ಒಂದೇ ನಾಣ್ಯದ ಎರಡು ಮುಖಗಳು ಎಂದು ಅವರು ಬಿಜೆಪಿ ಸರಕಾರ ಮತ್ತು ಕಾಂಗ್ರೆಸ್​ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಿಮ್ಮಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ರೈತರ ಕಷ್ಟಕಾರ್ಪಣ್ಯ ಬಗೆಹರಿಸುವ ಮನಸ್ಸಿಲ್ಲ. ಕೆಲವರು ಅಧಿಕಾರಕ್ಕೆರಲು ಸರ್ಕಸ್ ಮಾಡ್ತಿದ್ದೀರಿ. ಇನ್ನೂ ಕೆಲವರು ಅಧಿಕಾರ ಉಳಿಸಿಕೊಳ್ಳಲು ಸರ್ಕಸ್ ಮಾಡ್ತಿದ್ದೀರಿ. ಇವರಿಗೆ ಮತ ಹಾಕಿದ ರೈತರು ಮಾತ್ರ ಸಂಕಷ್ಟ ಜೀವನ‌ ನಡೆಸ್ತಿದ್ದಾರೆ. ಮೊದಲು ರೈತ ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಕೊಡಿ. ಒಂದು ಟನ್ ಕಬ್ಬಿಗೆ 4500 ರೂ‌. ನಿಗದಿ ಮಾಡಿ' ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: 'PayCM' ಡಿಜಿಟಲ್ ಆ್ಯಪ್ ಶೀಘ್ರ ಅನುಷ್ಠಾನಕ್ಕೆ ತರುವಂತೆ ಸಿಎಂಗೆ ಮೇಲ್ಮನೆ ಮಾಜಿ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಪತ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News