ಕಲಬುರಗಿ: ಇಬ್ಬರು ಪಿಎಫ್ಐ ಕಾರ್ಯಕರ್ತರು ವಶಕ್ಕೆ

Update: 2022-09-27 04:36 GMT

ಕಲಬುರಗಿ, ಸೆ.27: ರಾಜ್ಯಾದ್ಯಂತ ಪಿಎಫ್ಐ(PFI) ಸಂಘಟನೆಯ ಕಾರ್ಯಕರ್ತರ ಮೇಲೆ ಪೊಲೀಸರು ಮತ್ತೆ ದಾಳಿ ನಡೆಸಿದ್ದು, ಕಲಬುರಗಿಯಲ್ಲಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.   

ಮಂಗಳವಾರ ಬೆಳಗ್ಗೆ ನಗರದ ಇಕ್ಬಾಲ್ ಕಾಲನಿ ಸೇರಿ ನಾಲ್ಕು ಕಡೆ ದಾಳಿ ನಡೆಸಿರುವ ಪೊಲೀಸರು ಮಜಾರ್ ಹುಸೇನ್, ಮತ್ತು ಇಸಾಮಿದ್ದೀನ್ ಎಂಬ ಇಬ್ಬರು ಪಿಎಫ್‌ಐ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಹಲವರಿಗಾಗಿ ಶೋಧಾಕಾರ್ಯ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿಂದೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ ಪಿಎಫ್ಐ ಜಿಲ್ಲಾ ಅಧ್ಯಕ್ಷ ಶೇಕ ಇಜಾಝ್ ಅವರನ್ನು ಬಂಧಿಸಿದೆ.

ಇದನ್ನೂ ಓದಿ: ಚಾಮರಾಜನಗರ | ಪಿಎಫ್ಐ ಜಿಲ್ಲಾಧ್ಯಕ್ಷ, ಕಾರ್ಯದರ್ಶಿಯ ಬಂಧನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News