PFI ನಿಷೇಧ ಸ್ವಾಗತಾರ್ಹ, ಆರೆಸ್ಸೆಸ್ ದೇಶಭಕ್ತರನ್ನು ತಯಾರು ಮಾಡುವ ಕಾರ್ಖಾನೆ: ಬಿಜೆಪಿ ಶಾಸಕ ಯತ್ನಾಳ್

Update: 2022-09-28 10:06 GMT

ವಿಜಯಪುರ: ''ದೇಶ ವಿರೋಧಿ ಚಟುವಟಿಕೆ, ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗುವ ಇತಿಹಾಸ ಹೊಂದಿರುವ ಪಿಎಫ್ ಐ ಸಂಘಟನೆಯನ್ನು ನಿಷೇಧ ಮಾಡಬೇಕೆನ್ನುವುದು ನಮ್ಮೆಲ್ಲರ ಒತ್ತಾಸೆಯಾಗಿತ್ತು, ಸದ್ಯ ಕೇಂದ್ರದಿಂದ ಅದಕ್ಕೆ ಮನ್ನಣೆ ಸಿಕ್ಕಿದೆ'' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ. 

ವಿಜಯಪುರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, '' PFI ನಿಷೇಧಿಸಿರುವುದು ಸ್ವಾಗತಾರ್ಹ.   ಪ್ರಧಾನಿಗಳು, ಕೇಂದ್ರ ಗೃಹ ಸಚಿವರು PFI ಬ್ಯಾನ್ ಮಾಡಿದ್ದಾರೆ. ಇಂದು ನಮ್ಮ ಜನ ನೆಮ್ಮದಿಯಿಂದ ಬದುಕಲು ಐತಿಹಾಸಿಕ ನಿರ್ಣಯ ತೆಗೆದುಕೊಂಡಿದ್ದಾರೆ'' ಎಂದು ತಿಳಿಸಿದರು.

''ಆರೆಸ್ಸೆಸ್ ದೇಶಭಕ್ತರನ್ನು ತಯಾರು ಮಾಡುವ ಕಾರ್ಖಾನೆಯಾಗಿದೆ. ದೇಶದ ಉನ್ನತಸ್ಥಾನದಲ್ಲಿರೋದು RSS ನಿಂದ ಬಂದವರು. ಆರೆಸ್ಸೆಸ್ ಹಿಂಸಾಕೃತ್ಯದಲ್ಲಿ ತೊಡಗಿಲ್ಲ. ಮದ್ದು ಗುಂಡು ಸಂಗ್ರಹಿಸಿಲ್ಲ. ದೇಶವಿರೋಧಿ ಚಟುವಟಿಕೆ ಮಾಡಿಲ್ಲ. ಅದಕ್ಕಾಗಿ ಅದರ ಮೇಲಿದ್ದ ನಿಷೇಧವನ್ನ ಸುಪ್ರೀಂ ಕೋರ್ಟ್ ವಾಪಸ್ ತೆಗೆದುಕೊಂಡಿದೆ' ಎಂದರು. 

'ಐದು ವರ್ಷದಲ್ಲಿ PFI ಯನ್ನು ಬುಡದಿಂದ ಕಿತ್ತು ಹಾಕಬೇಕು. ಯಾವ ಹುತ್ತದಿಂದ ಯಾವ ಹಾವು ಬರುತ್ತದೆ ಗೊತ್ತಿಲ್ಲ. ಅಧ್ಯಯನ ಮಾಡಿ ಸಂಪೂರ್ಣ ಸರ್ವನಾಶ ಮಾಡಬೇಕು' ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News