ಯಾದಗಿರಿ: ಸಿಡಿಲು ಬಡಿದು ತಾಯಿ, ಇಬ್ಬರು ಮಕ್ಕಳು ಸೇರಿ ನಾಲ್ವರು ಮೃತ್ಯು

Update: 2022-09-28 14:36 GMT

ಯಾದಗಿರಿ: ಸಿಡಿಲು ಬಡಿದು ತಾಯಿ,ಇಬ್ಬರು ಮಕ್ಕಳು ಸೇರಿ ನಾಲ್ವರು ಮೃತಪಟ್ಟಿರುವ ಘಟನೆ ಗುರುಮಠಕಲ್‌ ತಾಲೂಕಿನ ಎಸ್ ಹೊಸಹಳ್ಳಿ ಬಳಿ ನಡೆದಿದೆ.

ಒಂದೇ ಕುಟುಂಬದ ತಾಯಿ ಮೋನಮ್ಮ(25), ಮಕ್ಕಳಾದ ಭಾನು (4) ಶ್ರೀನಿವಾಸ (2), ಹಾಗೂ ಮತ್ತೊಂದು ಘಟನೆಯಲ್ಲಿ ಸಾಬಣ್ಣ (17) ಸಾವನ್ನಪ್ಪಿದ್ದಾರೆ. ಮೋನಮ್ಮನ ಮೈದುನ ಭೀಮಾಶಂಕರ್ (32) ಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಇಂದು ಮಧ್ಯಾಹ್ನ ಯಾದಗಿರಿಯಿಂದ ಊರಿಗೆ ತೆರಳುತ್ತಿದ್ದಾಗ ಮಳೆ ಬಂದ ಹಿನ್ನೆಲೆ ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು ತಾಯಿ ಸೇರಿ ಇಬ್ಬರ ಮಕ್ಕಳ ಸಾವನ್ನಪ್ಪಿದ್ದಾರೆ. ಮತ್ತೊಂದು ಕಡೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸಾಬಣ್ಣ ಸಾವನಪ್ಪಿದ್ದಾರೆನ್ನಲಾಗಿದೆ.

ಗುರುಮಠಕಲ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News