ಬೆಳಗಾವಿ: ಎಸ್‌ಡಿಪಿಐ‌, ಪಿಎಫ್ಐ ಕಾರ್ಯಕರ್ತರಿಗೆ ಷರತ್ತುಬದ್ಧ ಜಾಮೀನು

Update: 2022-10-04 05:19 GMT

ಬೆಳಗಾವಿ: ಎಸ್‌ಡಿಪಿಐ‌ ಬೆಳಗಾವಿ ಜಿಲ್ಲಾಧ್ಯಕ್ಷ ಹಾಗೂ ನಿಷೇಧಿತ ಪಿಎಫ್ಐನ 6 ಮಂದಿ ಕಾರ್ಯಕರ್ತರಿಗೆ ಮಂಗಳವಾರ ಷರತ್ತುಬದ್ಧ ಜಾಮೀನು ನೀಡಲಾಗಿದೆ.

7 ಜನರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಬೆಳಗಾವಿ ಕಾನೂನು ‌ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ‌ಗಡಾಡಿ ಆದೇಶ ಹೊರಡಿಸಿದ್ದಾರೆ. 

ಎಸ್‌ಡಿಪಿಐ ಬೆಳಗಾವಿ ಜಿಲ್ಲಾಧ್ಯಕ್ಷ ಅಬೀದ್ ಖಾನ್ ಕಡೋಲಿ, ನಿಷೇಧಿತ ‌ಪಿಎಫ್ಐ ಕಾರ್ಯಕರ್ತರಾದ ಝಕೀವುಲ್ಲಾ ಫೈಜಿ, ಸಲಾಹುದ್ದೀನ್ ಖಿಲೆವಾಲೆ, ಬದ್ರುದ್ದೀನ್ ಪಟೇಲ್, ಸಮೀವುಲ್ಲಾ ಪೀರ್ಜಾದೆ, ಝಹೀರ್ ಘೀವಾಲೆ ರೆಹಾನ್ ಅಝೀಝ್ ಗೆ ಜಾಮೀನು ಸಿಕ್ಕಿದೆ.

ತಲಾ ಒಬ್ಬರಿಗೆ 50 ಸಾವಿರ ರೂ. ಬಾಂಡ್‌ ಪಡೆದು ಡಿಸಿಪಿ ರವೀಂದ್ರ ‌ಗಡಾಡಿ ಅವರು ಜಾಮೀನು ಮಂಜೂರು ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News