ಚಿಕ್ಕಬಳ್ಳಾಪುರ: ಡೆತ್ ನೋಟ್ ಬರೆದಿಟ್ಟು ಒಂದೇ ಕುಟುಂಬದ ಮೂವರು ಆತ್ಮಹತ್ಯೆ

Update: 2022-10-04 06:17 GMT
ಶ್ರೀರಾಮಪ್ಪ  | ಮನೋಜ್  

ಶಿಡ್ಲಘಟ್ಟ:  ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹಂಡಿಗನಾಳ ಗ್ರಾಮದಲ್ಲಿ  ಒಂದೇ ಕುಟುಂಬದ ತಂದೆ, ತಾಯಿ, ಮಗ ಮೂರು ಮಂದಿ‌ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 

ಶ್ರೀರಾಮಪ್ಪ (69), ಅವರ ಪತ್ನಿ ಸರೋಜ (55),ಪುತ್ರ ಮನೋಜ್(25) ವಿಷದ ಮಾತ್ರೆಗಳನ್ನು ಸೇವಿಸಿ ಮೃತಪಟ್ಟಿದ್ದಾರೆ ಎಂದು ತಿಳದು ಬಂದಿದೆ.

ಸ್ಥಳಕ್ಕೆ ಚಿಂತಾಮಣಿ ಉಪವಿಭಾಗದ ಡಿವೈಎಸ್ಪಿ ಕುಶಾಲ್ ಚೌಕ್ಸಿ ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಗುಂಡ್ಲುಪೇಟೆಯಲ್ಲಿ ರೈತರಿಂದ 'ಪೇ ಫಾರ್ಮರ್' ಪೋಸ್ಟರ್ ಅಭಿಯಾನ

ಮೃತರ ಮಗಳು ಅರ್ಚನಾ ನಾಪತ್ತೆಯಾಗಿರುವ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಹುಡುಕಾಟ ಆರಂಭಿಸಿದ್ದೇವು ಅಷ್ಟರಲ್ಲಿ ಮೂರು ಮಂದಿ ಅಮೋನಿಯಂ ಪಾಸ್ಟೇಟ್ ಯುಕ್ತ ಕಾಳು ಮಾತ್ರೆ ಸೇವಿಸಿ ಸಾವನ್ನಪ್ಪಿದ್ದಾರೆ. ಮಗಳು ಅರ್ಚನಾ ಅನ್ಯ ಜಾತಿಯ ಯುವಕನೊಂದಿಗೆ ಹೋಗಿರುವ ಶಂಕೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಮುಂದಿನ ತನಿಖೆಯಲ್ಲಿ ಸತ್ಯಾ‌ಂಶ ಹೊರಬೀಳಲಿದೆ ಎಂದು ತಿಳಿಸಿದ್ದಾರೆ. 

ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. 

ಡೆತ್ ನೋಟ್ ಪತ್ತೆ: ಅನ್ಯಜಾತಿಯವನಾದ ಹಂಡಿಗನಾಳ ಗ್ರಾಮದ ಚಾಲಕ ನಾರಾಯಣಸ್ವಾಮಿ ಜೊತೆಯಲ್ಲಿ ನನ್ನ ಮಗಳು ಅರ್ಚನಾ ಹೊರಟು ಹೋಗಿದ್ದಾಳೆ. ಇದರಿಂದ ಮನನೊಂದಿದ್ದೇವೆ. ತಮ್ಮ ಸಾವಿಗೆ ಮಗಳು ಕಾರಣ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News