ರಾಯಚೂರು: ಗಾಳಿಯಲ್ಲಿ ಗುಂಡು ಹಾರಿಸಿದ ಶಾಸಕ ಶಿವನಗೌಡ ನಾಯಕ್

Update: 2022-10-05 05:00 GMT

ರಾಯಚೂರು: ಆಯುಧ ಪೂಜೆ ಹಿನ್ನೆಲೆಯಲ್ಲಿ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ್, ಡಬಲ್ ಬ್ಯಾರೆಲ್ ಗನ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ ವೀಡಿಯೊ ವೈರಲ್‌ ಆಗಿದೆ.

ಎಲ್ಲೆಡೆ ಸಂಭ್ರಮದಿಂದ ಆಯುಧ ಪೂಜೆ ನಡೆಸಲಾಗುತ್ತಿದ್ದು, ಆಯುಧ ಹಾಗೂ ವಾಹನಗಳಿಗೆ ಜನರು ಪೂಜೆ ಸಲ್ಲಿಸುತ್ತಾರೆ. ಆದರೆ ಆಯುಧ ಪೂಜೆಯ ಜವಾಬ್ದಾರಿ ಮರೆತು ಶಾಸಕ ಶಿವನಗೌಡ ನಾಯಕ್ ನಾಡಬಂದೂಕಿ ನಿಂದ ಗುಂಡು ಹಾರಿಸಿದ್ದಾರೆ ಎಂದು ಜನರು ದೂರಿದ್ದಾರೆ.

ರಾಯಚೂರು ಜಿಲ್ಲೆಯ ದೇವದುರ್ಗ ಶಾಸಕ ಶಿವನಗೌಡ ನಾಯಕ್ ಅವರು 2-3 ಬಾರಿ ಗುಂಡು ಹಾರಿಸಿದ್ದಾರೆ. ಅರಕೇರಾದ ಮನೆಯಲ್ಲಿ‌ ಗುಂಡು ಹಾರಿಸಿ, ಆಯುಧ ಪೂಜೆ ಆಚರಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News