ಚಾಮರಾಜನಗರ | ನಾಡ ಬಂದೂಕು ಹಿಡಿದು ಅಕ್ರಮವಾಗಿ ಅರಣ್ಯ ಪ್ರವೇಶಿಸಿದ ಆರೋಪ: ಮೂವರ ಬಂಧನ

Update: 2022-10-05 13:09 GMT
ಬಂಧಿತ ಆರೋಪಿಗಳು

ಚಾಮರಾಜನಗರ: ನಾಡ ಬಂದೂಕು ಮತ್ತು ಹೈ ಫ್ರೆಶರ್ ಏರ್​ಗನ್ ಹಿಡಿದು ಅಕ್ರಮವಾಗಿ ಅರಣ್ಯ ಪ್ರವೇಶ ಮಾಡಿ ಓಡಾಡಿದ್ದಾರೆಂಬ ಆರೋಪದಲ್ಲಿ ಮೂವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿರುವ ಘಟನೆ ಹನೂರು ತಾಲೂಕಿನ ಗೋಪಿನಾಥಂ‌ ಸಮೀಪದ ಆಲಂಬಾಡಿ ಬಳಿ ನಡೆದಿದೆ.

ಹನೂರು ತಾಲೂಕಿನ ಹೊಗೆನಕಲ್ ಗ್ರಾಮದ ಮಾರಿಮುತ್ತು, ನಲ್ಲಾಂಪಟ್ಟಿ ಗ್ರಾಮದ ಕವಿನ್ ಕುಮಾರ್, ವಿಘ್ನೇಶ್ ಬಂಧಿತರು ಎಂದು ತಿಳಿದು ಬಂದಿದೆ.

ಹನೂರು ತಾಲೂಕಿನ ಗೋಪಿನಾಥಂ ಬಳಿಯ ಆಲಂಬಾಡಿ ಸಮೀಪದ ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ಗನ್​ಗಳೊಟ್ಟಿಗೆ ಓಡಾಡುತ್ತಿದ್ದ ಇವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.

ಬಂಧಿತರಲ್ಲಿ ಓರ್ವ ವೈದ್ಯ ಎಂದು ಹೇಳಲಾಗಿದೆ. ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಬಂಧಿತರಿಗೆ ವಿಚಾರಣೆ ನಡೆಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News