ಪಿಡಿಒ ಮೃತದೇಹ ಪತ್ತೆ; ಕೊಲೆ ಶಂಕೆ

Update: 2022-10-06 14:29 GMT
ಗಜದಂಡಯ್ಯ ಸ್ವಾಮಿ - ಮೃತ ಪಿಡಿಒ

ರಾಯಚೂರು, ಅ. 6: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹೊರ ವಲಯದ ಹೆದ್ದಾರಿ ಬಳಿ ಕೋಠಾ ಗ್ರಾಮ ಪಂಚಾಯಿತ್ ನ ಪಿಡಿಒ ಒಬ್ಬರ ಮೃತದೇಹ ಪತ್ತೆಯಾಗಿದೆ.

ಕೋಠಾ ಗ್ರಾಮ ಪಂಚಾಯತ್ ಪಿಡಿಒ ಗಜದಂಡಯ್ಯ ಸ್ವಾಮಿ (49) ಎಂಬುವರ ಮೃತದೇಹ ಪತ್ತೆಯಾಗಿದ್ದು, ತಲೆಗೆ ಬಲವಾಗಿ ಕಲ್ಲು ಅಥವಾ ಮಾರಕಾಸ್ತ್ರದಿಂದ ಹೊಡೆತ ಬಿದ್ದಿದೆ ಎನ್ನಲಾಗಿದೆ. 

ಗಜದಂಡಯ್ಯ ಅವರು ಕೋಠಾ ಗ್ರಾಮ ಪಂಚಾಯತ್ ಕಾರ್ಯದರ್ಶಿ ಹುದ್ದೆಯಿಂದ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಬಡ್ತಿ ಪಡೆದು ಕಾರ್ಯನಿರ್ವಹಿಸುತ್ತಿದ್ದರು.

 ಸ್ಥಳಕ್ಕೆ ಲಿಂಗಸುಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News