​ರಾಜಕೀಯ ಕದನಗಳನ್ನು ರಾಜಕೀಯ ರಣರಂಗದಲ್ಲಿಯೇ ನಡೆಸಬೇಕು: ಈ.ಡಿ. ಸಮನ್ಸ್ ವಿಚಾರಕ್ಕೆ ಡಿಕೆಶಿ ಪ್ರತಿಕ್ರಿಯೆ

Update: 2022-10-07 12:10 GMT

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಈ.ಡಿ) ವಿಚಾರಣೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D. K. Shivakumar) ಇಂದು (ಶುಕ್ರವಾರ) ಹಾಜರಾಗಿದ್ದಾರೆ. 

ಈ ನಡುವೆ ಟ್ವೀಟ್ ಮಾಡಿರುವ ಅವರು,'ರಾಜಕೀಯ ಕದನಗಳನ್ನು ರಾಜಕೀಯ ರಣರಂಗದಲ್ಲಿಯೇ ನಡೆಸಬೇಕು. BJP ತನ್ನ ರಾಜಕೀಯ ಎದುರಾಳಿಗಳಿಗೆ ಕಿರುಕುಳ ನೀಡಿ, ಬೆದರಿಸಲು ಸರ್ಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ' ಎಂದು ಆರೋಪಿಸಿದ್ದಾರೆ.

'ಇದಕ್ಕೆಲ್ಲ ಮೇ 2023 ರಲ್ಲಿ ರಾಜ್ಯದ ಜನರೇ ಉತ್ತರ ನೀಡಲಿದ್ದಾರೆ ED ಮೂಲಕ ನಿರುದ್ಯೋಗ, ಬೆಲೆ ಏರಿಕೆಯನ್ನು ನಿಗ್ರಹಿಸಲು ಸಾಧ್ಯವಿಲ್ಲ ಎನ್ನುವುದು BJPಗೆ ಅರಿವಾಗಬೇಕಿದೆ'' ಎಂದು ಹೇಳಿದ್ದಾರೆ.

ಇದನ್ನೂ ಓದಿ: ನನ್ನ ಮನವಿಯನ್ನು ತಿರಸ್ಕರಿಸಿ, ನಾಳೆ ವಿಚಾರಣೆಗೆ ಬರಲೇಬೇಕೆಂದು ಹೇಳಿದ್ದಾರೆ: ಡಿ.ಕೆ. ಶಿವಕುಮಾರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News