‘ಆದರ್ಶ ಶಿಕ್ಷಕ ಪ್ರಶಸ್ತಿ'ಗೆ ಮೂಡಬಿದರೆಯ ಮುನಿರಾಜ ರೆಂಜಾಳ ಆಯ್ಕೆ
Update: 2022-10-07 16:51 GMT
ಬೆಂಗಳೂರು, ಅ. 7: ‘ಮಿರ್ಜಿ ಅಣ್ಣಾರಾಯ ಆದರ್ಶ ಶಿಕ್ಷಕ ಪ್ರಶಸ್ತಿ'ಗೆ ಮೂಡಬಿದರೆಯ ಮುನಿರಾಜ ರೆಂಜಾಳ ಆಯ್ಕೆಯಾಗಿದ್ದಾರೆ.
ಅಖಿಲ ಕರ್ನಾಟಕ ಜೈನ ಶಿಕ್ಷಕರ ವೇದಿಕೆ ಹಾಗೂ ಶೇಡಬಾಳದ ಮಿರ್ಜಿ ಅಣ್ಣಾರಾಯ ಸ್ಮಾರಕ ಪ್ರತಿಷ್ಠಾನದ ಸಹಯೋಗದಲ್ಲಿ ನೀಡುವ ಈ ಪ್ರಶಸ್ತಿಗೆ ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳರವರನ್ನು ಆಯ್ಕೆ ಮಾಡಲಾಗಿದ್ದು ಅ.8ರಂದು ಬೆಂಗಳೂರಿನ ಜೈನ ಭವನದಲ್ಲಿನಡೆಯಲ್ಲಿರುವ ‘ಅಖಿಲ ಕರ್ನಾಟಕ ಜೈನ ಶಿಕ್ಷಕರ' ಸಮಾವೇಶದಲ್ಲಿ ಈ ಪ್ರಶಸ್ತಿಯನ್ನು ಕಸಾಪ ಅಧ್ಯಕ್ಷ ಡಾ.ಮಹೇಶ ಜೋಷಿಯವರು ಪ್ರದಾನ ಮಾಡಲಿದ್ದಾರೆ.
ಧರ್ಮಸ್ಥಳದ ಸುರೇಂದ್ರಕುಮಾರ ಅವರು ಅಧ್ಯಕ್ಷತೆಯಲ್ಲಿ ಜ್ಞಾನಶ್ರೀ ಪ್ರಶಸ್ತಿ ಸಂವಾದ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅಖಿಲ ಕರ್ನಾಟಕ ಜೈನಶಿಕ್ಷಕರವೇದಿಕೆ ಅಧ್ಯಕ್ಷ ಡಾ.ಪದ್ಮಿನಿ ನಾಗರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.