ಮೀಸಲಾತಿ ಹೆಚ್ಚಳ ಮಾಡುವುದರಿಂದ ಬಿಜೆಪಿಯವರಿಗೆ ಮತ ಬರಲ್ಲ: ಕುಮಾರಸ್ವಾಮಿ

Update: 2022-10-08 16:31 GMT

ಮೈಸೂರು,8: 'ಮೀಸಲಾತಿ ಹೆಚ್ಚಳದಿಂದ ಬಿಜೆಪಿಯವರಿಗೆ ಮತ ಬರಲ್ಲ. ಮೀಸಲಾತಿ ಹೆಚ್ಚಳ ಮಾಡಲು ಹೊರಟಿರುವ ರಾಜ್ಯ ಸರ್ಕಾರ ಜೇನುಗೂಡಿಗೆ ಕಲ್ಲು ಹೊಡೆಯುವ ಕೆಲಸ ಮಾಡಿದೆ' ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಮೈಸೂರಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿ, ''ಎಸ್.ಸಿ, ಎಸ್.ಟಿ. ಮೀಸಲಾತಿ ನೀಡುವುದರಿಂದ ತಮಗೆ ಮತ ಬರುತ್ತದೆ ಎಂದು ಬಿಜೆಪಿಯವರು ಅಂದುಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಅದು ಮತವಾಗಿ ಪರಿವರ್ತನೆಯಾಗುವುದಿಲ್ಲ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಎರಡು ವರ್ಷದ ಹಿಂದೆಯೇ ವರದಿ ಕೊಟ್ಟಿದ್ದರು. ಈಗ ಅದ ಅನುಷ್ಠಾನ ಮಾಡುತ್ತಿದ್ದಾರೆ. ಅದರ ಅರ್ಥ ಏನು ಎಂಬುದು ಎಲ್ಲರಿಗೂ ಗೊತ್ತು'' ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು. 

''ರಾಜಕೀಯ ಮುಖಂಡರುಗಳೇ ತಮಗಾಗಿ ತಮ್ಮ ಅನುಕೂಲಕ್ಕಾಗಿ ಮೀಸಲಾತಿ ಹೋರಾಟವನ್ನ ಹುಟ್ಟು ಹಾಕಿದ್ದಾರೆ. ಮುಂದೊಂದು ದಿನ ಅವರಿಗೆ ತಿರುಗು ಬಾಣ ಆಗುತ್ತದೆ.ಸರ್ಕಾರ ಜೇನುಗೂಡಿಗೆ ಕಲ್ಲು ಎಸೆಯುವ ಕೆಲಸ ಮಾಡುತ್ತಿದೆ ''ಎಂದು ಎಚ್ಚರಿಕೆ ನೀಡಿದರು. 

'ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಾವಣೆ ವಿಚಾರ ಮಾತನಾಡಿ, ಹೆಸರು ಬದಲಾವಣೆ ಮೂಲಕ ಭಾವನಾತ್ಮಕವಾಗಿ ಜನರನ್ನ ಸೆಳೆಯುವ ತಂತ್ರವಿದು. ಹೆಸರು ಬದಲಾವಣೆ ಮಾಡಿದ ಕೂಡಲೇ ಜನರ ಜೀವನ ಬದಲಾವಣೆ ಆಗುವುದಿಲ್ಲ .ಆಯಾ ಕಾಲಕ್ಕೆ ಈ ರೀತಿ ಬದಲಾವಣೆಗಳು ನಡೆಯುತ್ತಲೇ ಇರುತ್ತದೆ,ಇದು ಕೂಡ ವೋಟ್ ಬ್ಯಾಂಕ್‌ನ ಭಾಗವಾಗಿದೆ. ಕೇಂದ್ರೀಯಾ ಪರೀಕ್ಷೆಗಳಲ್ಲಿ ಹಿಂದೆ ಇಂಗ್ಲೀಷ್ ಗೆ ಮಾತ್ರ ಅವಕಾಶ ವಿಚಾರವಾಗಿ ಮಾತನಾಡಿ, ಇದು ಕನ್ನಡಿಗರಿಗೆ ಮಾತ್ರ ಅಲ್ಲ, ಎಲ್ಲಾ ಭಾಷೆಯರಿಗೆ ಆಗಿರುವ ಅನ್ಯಾಯ.ಇದು ವ್ಯವಸ್ಥಿತವಾಗಿ ಹಿಂದಿಯನ್ನು ಹೇರುವ ಪ್ರಕ್ರಿಯೆ,ಡಿಟಿಎಚ್ ಗಳಲ್ಲೂ ಈಗ ಇಂಗ್ಲೀಷ್ ಜೊತೆ ಹಿಂದಿ ಬರುತ್ತಿದೆ.ಇದು ಪ್ರಾದೇಶಿಕ ಭಾಷೆಗಳಿಗೆ  ಅಪಾಯಕಾರಿ.ಕೇಂದ್ರ ಸರ್ಕಾರದ ಈ ನಿಲುವು ಖಂಡನೀಯ'' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News