ಕಲಬುರಗಿ: ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ; ವಿಎಚ್‌ಪಿ ಮುಖಂಡನಿಗೆ ನೋಟಿಸ್
Update: 2022-10-09 10:09 GMT
ಕಲಬುರಗಿ: ಆಯುಧ ಪೂಜೆ ದಿನದಂದು ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ ಸಂಬಂಧ ಕಲಬುರಗಿ ವಿಶ್ವ ಹಿಂದೂ ಪರಿಷತ್ ಮುಖಂಡನಿಗೆ ಇಲ್ಲಿನ ದಕ್ಷಿಣ ವಿಭಾಗದ ಪೊಲೀಸ್ ಸಹಾಯಕ ಆಯುಕ್ತರು ನೋಟಿಸ್ ನೀಡಿದ್ದಾರೆ.
ವಿಎಚ್‌ಪಿ ಮುಖಂಡ ಲಿಂಗರಾಜಪ್ಪ ತನ್ನ ಮನೆಯ ಅಂಗಳದಲ್ಲಿ ಒಂದು ಬಂದೂಕು ಹಾಗೂ ಒಂದು ಪಿಸ್ತೂಲ್ ಮೂಲಕ ಸುಮಾರು 8 ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ ವಿಡಿಯೋ ವೈರಲ್ ಆಗಿತ್ತು.
ಶಸ್ತ್ರಾಸ್ತ್ರ ಕಾಯ್ದೆ ಮತ್ತು ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ದಕ್ಷಿಣ ವಿಭಾಗದ ಪೊಲೀಸ್ ಸಹಾಯಕ ಆಯುಕ್ತರು ಇದೀಗ ನೋಟಿಸ್ ನೀಡಿದ್ದಾರೆ.
ಫೈರ್ ಮಾಡಲಾದ ಗನ್ ಮತ್ತು ಪಿಸ್ತೂಲ್ ಪರವಾನಗಿ ಪ್ರತಿ ಸಲ್ಲಿಸುವಂತೆ ಹಾಗೂ ಗುಂಡು ಹಾರಿಸಿದ ಬಗ್ಗೆ ವಿವರಣೆ ನೀಡುವಂತೆ ನೋಟಿಸ್ ನಲ್ಲಿ ಸೂಚಿಸಲಾಗಿದೆ.
ವಿಶ್ವ ಹಿಂದೂ ಪರಿಷತ್ ಮುಖಂಡ ಗಾಳಿಯಲ್ಲಿ ಗುಂಡು ಹಾರಿಸಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.