ಮಿದುಳು ನಿಷ್ಕ್ರಿಯ: ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಕೊಡಗಿನ ಮಹಿಳೆ

Update: 2022-10-11 14:58 GMT
ಪಂದ್ಯಂಡ ಆಶಾ -ಮೃತ ಮಹಿಳೆ

ಮಡಿಕೇರಿ ಅ.11 : ಮಡಿಕೇರಿ ನಗರದ ಸುದರ್ಶನ ಬಡಾವಣೆ ನಿವಾಸಿ ಗಪ್ಪು ಗಣಪತಿ ಅವರ ಪತ್ನಿ, ಮನೆಯಲ್ಲೇ ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದ (ಬೇಬಿ ಸಿಟ್ಟಿಂಗ್) ಶಿಕ್ಷಕಿಯೊಬ್ಬರು ನಿಷ್ಕ್ರಿಯಗೊಂಡು ಮೃತಪಟ್ಟಿದ್ದಾರೆ.

ಕಣ್ಣು, ಕಿಡ್ನಿ, ಹೃದಯ ಲೀವರ್ ದಾನ ಮಾಡುವ ಮೂಲಕ ಮಡಿಕೇರಿ ನಿವಾಸಿ  ಪಂದ್ಯಂಡ ಆಶಾ (53) ಸಾವಿನಲ್ಲೂ ಸಾರ್ಥಕತೆ ಮೆರೆದ್ದಾರೆ.

ಇವರ ಅಂಗಾಂಗಗಳನ್ನು ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾನ ಮಾಡಲಾಗಿದೆ. ಅಂತ್ಯಕ್ರಿಯೆ ಮಂಗಳವಾರ ಮಡಿಕೇರಿ ಕೊಡವ ಸಮಾಜದ ಚಿತಾಗಾರದಲ್ಲಿ ನಡೆಯಿತು. ಮೃತರು ಪತಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಆರೋಗ್ಯ ಸಚಿವ ಡಾ.ಸುಧಾಕರ್ ಸೇರಿದಂತೆ ಸುದರ್ಶನ ಬಡಾವಣೆಯ ನಿವಾಸಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News