ಚಿಕ್ಕಮಗಳೂರು: ಖಾಸಗಿ ಟಿವಿ ಚಾನಲ್ ನ ವೀಡಿಯೊ ಜರ್ನಲಿಸ್ಟ್ ಆತ್ಮಹತ್ಯೆ

Update: 2022-10-15 13:31 GMT
ಶಶಿಕುಮಾರ್

ಚಿಕ್ಕಮಗಳೂರು, ಅ.15:  ರಾಜ್ಯ ಮಟ್ಟದ ನ್ಯೂಸ್ ಚಾನಲ್ ಒಂದರಲ್ಲಿ ವೀಡಿಯೊ ಜರ್ನಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಶಿಕುಮಾರ್ (35) ಶುಕ್ರವಾರ ತಡರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. 

ಕಳೆದ 15 ವರ್ಷಗಳಿಂದ ಚಿಕ್ಕಮಗಳೂರು ನಗರದಲ್ಲಿ ರಾಜ್ಯ ಮಟ್ಟದ ನ್ಯೂಸ್ ಚಾನಲ್  ಒಂದರಲ್ಲಿ ವಿಡಿಯೋ ಜರ್ನಲಿಸ್ಟ್  ಆಗಿ ಕೆಲಸ ಮಾಡುತ್ತಿದ್ದ ಶಶಿಕುಮಾರ್,  ಶುಕ್ರವಾರ ರಾತ್ರಿ ತಮ್ಮ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ  ಆತ್ಮಹತ್ಯೆ ಮಾಡಿಕೊಂಡಿದ್ದಾನೆನ್ನಲಾಗಿದೆ. 

ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶಶಿಕುಮಾರ್ ಪತ್ನಿ ಹಾಗೂ ಓರ್ವ ಮಗಳು, ಸಂಬಂಧಿಕರನ್ನು ಅಗಲಿದ್ದಾರೆ. ಶನಿವಾರ ಸಂಜೆ ಚಿಕ್ಕಮಗಳೂರು ನಗರದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಿಕ್ಕಮಗಳೂರು ಪ್ರೆಸ್‍ಕ್ಲಬ್ ಸದಸ್ಯರಾಗಿದ್ದ ಶಶಿಕುಮಾರ್ ಅಕಾಲಿಕ ನಿಧನದ ಹಿನ್ನೆಯಲ್ಲಿ ಶನಿವಾರ ಮಧ್ಯಾಹ್ನ ಪ್ರಸ್‍ಕ್ಲಬ್ ಆವರಣದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.

ಇದನ್ನೂ ಓದಿ: ಇಂದಿರಾ ಗಾಂಧಿ, ತಾಯಿ ಸೋನಿಯಾ ಗಾಂಧಿಯನ್ನು ಗೆಲ್ಲಿಸಿದ ಕರ್ನಾಟಕಕ್ಕೆ ಧನ್ಯವಾದ: ಬಳ್ಳಾರಿಯಲ್ಲಿ ರಾಹುಲ್ ಗಾಂಧಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News