ಸುಲ್ತಾನ್ ಬತ್ತೇರಿ ನದಿ ಕಿನಾರೆ ಶೀಘ್ರ ಅಭಿವೃದ್ಧಿ: ಸಚಿವ ಅಂಗಾರ

Update: 2022-10-17 09:57 GMT

ಮಂಗಳೂರು, ಅ. 17: ಇಲ್ಲಿನ ಸುಲ್ತಾನ್‌ಬತ್ತೇರಿ ಬಳಿಯ ನದಿ ಕಿನಾರೆಯನ್ನು ಶೀಘ್ರದಲ್ಲೇ ಅಭಿವೃದ್ದಿಪಡಿಸಿ, ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಮೀನುಗಾರಿಕಾ ಹಾಗೂ ಬಂದರು ಖಾತೆ ಸಚಿವ ಎಸ್. ಅಂಗಾರ ತಿಳಿಸಿದ್ದಾರೆ.

ಬೋಳೂರು ಮೊಗವೀರ ಮಹಾಸಭಾದ ನೂತನ ಆಡಳಿತ ಸಮಿತಿಯ ವಿನಂತಿ ಮೇರೆಗೆ ಬೋಳೂರು ನದಿ ಕಿನಾರೆಗೆ ಭೇಟಿ ನೀಡಿದ ಸಚಿವರು, ಗ್ರಾಮ ಸಭಾದ ಪದಾಧಿಕಾರಿಗಳು ನೀಡಿದ ಮನವಿ ಸ್ವೀಕರಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನದಿ ಕಿನಾರೆಯಲ್ಲಿ ಜೆಟ್ಟಿ ವಿಸ್ತರಣೆ, ನಾಡ ದೋಣಿಗಳ ತಂಗುದಾಣ ವ್ಯವಸ್ಥೆ, ಮೀನುಗಾರರ ಬಲೆ ಇತ್ಯಾದಿಗಳ ನಿರ್ವಹಣೆಗೆ ಶೆಡ್ ನಿರ್ಮಾಣ, ಕಿನಾರೆಯ ರಸ್ತೆ ವಿಸ್ತರಣೆ, ಹೈಮಾಸ್ಕ್ ವಿದ್ಯುತ್ ಕಂಬಗಳ ಜೋಡಣೆ, ಡ್ರೆಜ್ಜಿಂಗ್ ಕಾಮಗಾರಿ, ಮೀನುಗಾರರಿಗೆ ಇನ್ಸುರೆನ್ಸ್ ವ್ಯವಸ್ಥೆ, ನದಿ ಮೀನುಗಾರರ ಸಮಸ್ಯೆಗಳ ಪರಿಹಾರ ಮುಂತಾದ ಬೇಡಿಕೆಗಳ ಪಟ್ಟಿಯನ್ನು ಸಚಿವರಿಗೆ ಸಲ್ಲಿಸಲಾಯಿತು.

ಬೋಳೂರು ಶ್ರೀ ಬಾಲಾಂಜನೇಯ ವ್ಯಾಯಾಮ ಶಾಲೆಗೂ ಈ ಸಂದರ್ಭ ಸಚಿವರು ಭೇಟಿ ನೀಡಿದರು. ಗ್ರಾಮಚಾವಡಿಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಗ್ರಾಮದ ನೂತನ ಸಮಿತಿಯ ಪರವಾಗಿ ಸಚಿವರನ್ನು ಸಮ್ಮಾನಿಸಲಾಯಿತು.

ಮಹಾ ಸಭಾದ ಅಧ್ಯಕ್ಷ ಯಶವಂತ ಪಿ. ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಗೌರವ ಸಲಹೆಗಾರರಾದ ಜಗದೀಶ ಬೋಳೂರು, ಗುರಿಕಾರರಾದ ಎಸ್.ಡಿ. ಅಮೀನ್, ಮೊಗವೀರ ಏಳು ಪಟ್ಣ ಸಂಯುಕ್ತಾ ಸಭಾದ ಅಧ್ಯಕ್ಷ ಗೌತಮ್ ಸಾಲ್ಯಾನ್ ಕೋಡಿಕಲ್, ಮಾಸ್ಟರ್ ಆನಂದ ಪುತ್ರನ್, ಹಿರಿಯ ಕಲಾವಿದರಾದ ವಿ.ಜಿ. ಪಾಲ್, ಬೋಳೂರು ಮೊಗವೀರ ಮಹಿಳಾ ಸಂಘದ ಅಧ್ಯಕ್ಷೆ ಯೋಗಿನಿ ಬಂಗೇರ ಉಪಸ್ಥಿತರಿದ್ದರು.

ಉಪಾಧ್ಯಕ್ಷ ರಂಜನ್ ಕಾಂಚನ್, ಕೋಶಾಧಿಕಾರಿ ಜಿತೇಂದ್ರ ಪುತ್ರನ್, ಜೊತೆ ಕಾರ್ಯದರ್ಶಿ ದೇವದಾಸ ಅಮೀನ್, ಸಮಿತಿ ಸದಸ್ಯರಾದ ಜಗದೀಶ ಬಂಗೇರ, ಮನೋಹರ ಬೋಳೂರು, ಕುಮಾರ್ ಅಮೀನ್, ನವೀನ್ ಸಾಲ್ಯಾನ್, ಬಾಸ್ಕರ ಸಾಲ್ಯಾನ್, ಫೆರಿ ಸಮಿತಿಯ ಅರುಣ್ ಮೆಂಡನ್, ಚಂದ್ರಹಾಸ ಪುತ್ರನ್, ದಿನಕರ ಕರ್ಕೇರ, ಪದ್ಮನಾಭ ಪುತ್ರನ್ ಹಾಗೂ ತಾರನಾಥ ಕರ್ಕೇರ, ಧೀರಜ್ ಪುತ್ರನ್, ಹರ್ಷಿತ್ ಸಾಲ್ಯಾನ್, ಮಧು ಕರ್ಕೇರ, ಶ್ರವಣ್ ಮುಂತಾದವರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಸುಭಾಷ್ ಕುಂದರ್ ಪ್ರಸಆತವಿಸಿದರು. ಯಶವಂತ ಬೋಳೂರು ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News