ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ: ಕೆ.ಎಸ್. ಈಶ್ವರಪ್ಪ
Update: 2022-10-17 14:50 GMT
ಹಾಸನ: 'ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಆದರೆ ಈ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿರುತ್ತದೆ' ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, 'ಸಚಿವನನ್ನಾಗಿ ಮಾಡುವ ತೀರ್ಮಾನ ಮಾಡೊದು ಹೈಕಮಾಂಡ್. ಅದರಂತೆ ನಡೆಯುತ್ತೇನೆ. ನಾನು ನನ್ನ ಮೇಲಿನ ಆರೋಪದಿಂದ ದೋಷ ಮುಕ್ತನಾಗಿದ್ದೇನೆ' ಎಂದು ಹೇಳಿದರು.
''ಭಾರತ್ ಜೋಡೊ ಯಾತ್ರೆ ಅಂತಹ ಎಷ್ಟೋ ಯಾತ್ರೆ ಬಿಜೆಪಿ ಮಾಡಿ ಯಶಸ್ವಿಯಾಗಿದೆ. ಕಾಂಗ್ರೆಸ್ ನವರು ಹಣ, ಎಣ್ಣೆ ಮತ್ತು ಬಿರಿಯಾನಿ ಕೊಡುವ ಮೂಲಕ ಭಾರತ್ ಜೋಡೊ ಯಾತ್ರೆಗೆ ಜನರನ್ನು ಸೆಳೆದು ಕರೆದುಕೊಂಡು ಬಂದಿದ್ದಾರೆ' ಎಂದು ಆರೋಪಿಸಿದರು.