ಹಾಸನ | ದೇವಾಲಯದ ಆವರಣದಲ್ಲಿ ಸರಕಾರಿ ನೌಕರನಿಗೆ ಕಪಾಳ ಮೋಕ್ಷ ಮಾಡಿದ ಆರೋಪ: ಎಸಿ ವಿರುದ್ಧ ಕ್ರಮಕ್ಕೆ ಆಪ್ ಆಗ್ರಹ

Update: 2022-10-19 14:48 GMT

ಹಾಸನ: ಹಾಸನಾಂಬ ದೇವಾಲಯದ ಆವರಣದಲ್ಲಿ ಸರಕಾರಿ ನೌಕರ ನೋರ್ವನಿಗೆ ಕಪಾಳ ಮೋಕ್ಷ ಮಾಡಿದ ಎಸಿ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಕಪ್ಪು ಪಟ್ಟಿ ಧರಿಸಿ,  ಪ್ರತಿಭಟನೆ ಮಾಡುವುದಾಗಿ ಆಮ್ ಆದ್ಮಿ ಪಕ್ಷದ ಮುಖಂಡರಾದ ಅಗಿಲೆ ಯೋಗೀಶ್ ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ''ಸರಕಾರಿ ನೌಕರನೋರ್ವ ಕುಟುಂಬ ಸದಸ್ಯರ ಜೊತೆ ಹಾಸನಾಂಬೆ ದೇವಾಲಯಕ್ಕೆ ಬಂದಾಗ ದೇವಾಲಯದ ಆವರಣದಲ್ಲೇ ನೌಕರನಿಗೆ ಉಪ ವಿಭಾಗಾಧಿಕಾರಿ ಅವರು ಕಪಾಳ ಮೋಕ್ಷ ಮಾಡಿ ಅಪಮಾನ ಮಾಡಿದ್ದು, ಕೋಡಲೇ ಅವರ​ ವಿರುದ್ದ ಕ್ರಮ ಕೈಗೊಳ್ಳದಿದ್ದದೆ ಹೋರಾಟ ಮಾಡಲಾಗುವುದು. ಒಬ್ಬ ಉನ್ನತ ಅಧಿಕಾರಿಯಾಗಿ ಸಾರ್ವಜನಿಕ ಸ್ಥಳದಲ್ಲಿ ಕುಟುಂಬ ಸಮೇತರಾಗಿ ದರ್ಶನಕ್ಕೆ ಆಗಮಿಸಿದ ತನ್ನ ಅಧೀನ ಅಧಿಕಾರಿಯ ಮೇಲೆ ಏಕಾಏಕಿ ಹಲ್ಲೆ ಮಾಡಿರುವುದು ಖಂಡನೀಯ. ತಕ್ಷಣ ಅವರನ್ನು ಸೇವೆಯಿಂದ ವಜಾ ಮಾಡಬೇಕು'' ಎಂದು ಆಗ್ರಹಿಸಿದರು.

''ಘಟನೆ ನಡೆದು ಎರಡು ದಿನಗಳು ಕಳೆದರೂ ಜಿಲ್ಲಾಧಿಕಾರಿ, ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಅವರು, ಜಿಲ್ಲಾಡಳಿತ ಕೂಡಲೇ ಜಗದೀಶ್ ವಿರುದ್ದ ಕಠಿಣ ಕ್ರಮ ಕೈಗೊಳ್ಳದೇ ಇದ್ದರೆ ಶನಿವಾರ ದೇವಾಲಯದ ಎದುರೇ ಆಮ್ ಆದ್ಮಿ ಮುಖಂಡರು ಡಿಸಿ ವಿರುದ್ದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗುವುದು'' ಎಂದು ಎಚ್ಚರಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಆಮ್ಆದ್ಮಿ ಪಕ್ಷದ ಮುಖಂಡರಾದ ಮಂಜುನಾಥ್, ಗೋಪಿನಾಥ್, ಸುಂದರೇಶ್, ಕುಮಾರ್ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News