ಟ್ರಯಲ್ ನೋಡುವ ನೆಪದಲ್ಲಿ ಬೈಕ್ ಕಳವು
Update: 2022-10-19 16:52 GMT
ಮಂಗಳೂರು: ಟ್ರಯಲ್ ನೋಡುವ ನೆಪದಲ್ಲಿ ಕಟ್ಟಡ ಕೆಲಸದ ಕಾರ್ಮಿಕನೊಬ್ಬ ಬೈಕನ್ನು ಕದ್ದೊಯ್ದ ಘಟನೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅ.15ರಂದು ನಡೆದಿದೆ.
ಚಾರ್ಮಾಡಿಯ ಮೆಹರೂಫ್ ಎಂಬವರಿಗೆ ಸೇರಿದ ಬೈಕನ್ನು ಹಾವೇರಿ ಮೂಲದ ಆರೋಪಿ ಅರಾಫತ್ ಎಂಬಾತ ಟ್ರಯಲ್ ನೋಡುವುದಾಗಿ ಹೇಳಿ ಅ.15ರಂದು ಬೆಳಗ್ಗೆ 9.30ಕ್ಕೆ ಕೊಂಡೊಯ್ದವ ಈವರೆಗೆ ಮರಳಿಸಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.