ಭೂತ ಕೋಲದ ಬಗ್ಗೆ ಅವಹೇಳನ ಆರೋಪ: ನಟ ಚೇತನ್ ವಿರುದ್ಧ ಕಾರ್ಕಳ ಪೊಲೀಸ್ ಠಾಣೆಗೆ ದೂರು
Update: 2022-10-20 08:24 GMT
ಕಾರ್ಕಳ : ಭೂತ ಕೋಲದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆ ತಂದಿರುವುದಾಗಿ ಆರೋಪಿಸಿ ಕನ್ನಡದ ನಟ ಚೇತನ್ ವಿರುದ್ಧ ಹಿಂದು ಜಾಗರಣ ವೇದಿಕೆ ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದೆ.
ಬೋಳ ಸದಾಶಿವ ಶೆಟ್ಟಿ, ಕೆಎಂಎಫ್ ನಿರ್ದೇಶಕ ನರಸಿಂಹ ಕಾಮತ್, ಹಿಂದು ಜಾಗರಣ ವೇದಿಕೆ ಕಾರ್ಕಳ ನಗರ ಸಂಯೋಜಕ್ ಸಂದೀಪ್ ಕಾರ್ಲ, ದೀಪಕ್ ಬೈಲೂರು, ಸುಭಾಶ್ಚಂದ್ರ ಹೆಗ್ಡೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಲ್ಕೆ ಸಮುದಾಯದ ದೀಪಕ್ ಕಿರಣ್ ಎಂಬವರು ನಗರ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.