ಭೂತ ಕೋಲದ ಬಗ್ಗೆ ಅವಹೇಳನ ಆರೋಪ: ನಟ ಚೇತನ್ ವಿರುದ್ಧ ಮಡಿಕೇರಿಯಲ್ಲಿ ದೂರು ದಾಖಲು

Update: 2022-10-21 11:29 GMT

ಮಡಿಕೇರಿ ಅ.21 : 'ದೈವಾರಾಧನೆ ಹಿಂದೂ ಸಂಸ್ಕೃತಿ ಅಲ್ಲ' ಎಂಬ ಹೇಳಿಕೆ ನೀಡುವ ಮೂಲಕ ನಟ ಚೇತನ್ ಲಕ್ಷಾಂತರ ಭಕ್ತರ ಮನಸ್ಸಿಗೆ ನೋವುಂಟು ಮಾಡಿದ್ದಾರೆ ಮತ್ತು ಸಮಾಜದಲ್ಲಿ ಗೊಂದಲ ಸೃಷ್ಟಿಸಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೊಡಗು ಯುವಸೇನೆ ಮಡಿಕೇರಿಯಲ್ಲಿ ದೂರು ದಾಖಲಿಸಿದೆ.

ಯುವಸೇನೆಯ ಜಿಲ್ಲಾ ಉಪಾಧ್ಯಕ್ಷ ನಡುಮುಟ್ಲು ಪ್ರವೀಣ್ ಅವರು ಡಿವೈಎಸ್‍ಪಿ ಗೆ ದೂರು ಸಲ್ಲಿಸಿ ಚೇತನ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. 

ಇದೇ ವಿಚಾರಕ್ಕೆ ಸಂಬಂಧಿಸಿ ನಟ ಚೇತನ್ ವಿರುದ್ಧ ಹಿಂದೂ ಜಾಗರಣ ವೇದಿಕೆ‌ ಗುರುವಾರ ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿತ್ತು. 

ಇದನ್ನೂ ಓದಿ: ಭೂತಕೋಲ ಮೂಲ ನಿವಾಸಿಗಳದ್ದು ಎಂಬ ನಟ ಚೇತನ್‌ ಹೇಳಿಕೆ ಸಮರ್ಥಿಸಿದ ಸಂತೋಷ್‌ ಗುರೂಜಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News