ಅವರ ತಾಳ್ಮೆ, ಪರಿಶ್ರಮ, ದೃಢ ಸಂಕಲ್ಪಕ್ಕೆ ನನ್ನದೊಂದು ಸಲಾಂ: ರಾಹುಲ್ ಗಾಂಧಿ ಫೋಟೋ ಹಂಚಿಕೊಂಡ ಸಿದ್ದರಾಮಯ್ಯ
ರಾಯಚೂರು: ಜಿಲ್ಲೆಯಲ್ಲಿ ಎರಡನೇ ದಿನಕ್ಕೆ ಕಾಲಿಟ್ಟಿರುವ ರಾಹುಲ್ ಗಾಂಧಿ ಅವರ ನೃತೃತ್ವದ ಭಾರತ್ ಜೋಡೊ ಯಾತ್ರೆ ಸದ್ಯ ಯರೇಗಾ ಗ್ರಾಮದಿಂದ ಆರಂಭವಾಗಿದೆ.
ಈ ನಡುವೆ ಟ್ವೀಟರ್ ನಸಿದ್ದರಾಮಯ್ಯಲ್ಲಿ ರಾಹುಲ್ ಗಾಂಧಿ ಜೊತೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿತ್ತಿರುವ ಫೋಟೋ ಹಂಚಿಕೊಂಡಿರುವ ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, 'ರಾಹುಲ್ ಗಾಂಧಿಯವರ ತಾಳ್ಮೆ, ಪರಿಶ್ರಮ, ದೃಢ ಸಂಕಲ್ಪಕ್ಕೆ ನನ್ನದೊಂದು ಸಲಾಂ' ಎಂದು ಬರೆದುಕೊಂಡಿದ್ದಾರೆ.
''ನಡೆದಷ್ಟೂ ಹಿಗ್ಗುತ್ತಿರುವ ರಾಹುಲ್ ಗಾಂಧಿ ಅವರ ಉತ್ಸಾಹ, ನೊಂದ ಜನರನ್ನು ಅವರು ಸಂತೈಸಿ, ಬದುಕಿನ ಭರವಸೆ ತುಂಬುವ ರೀತಿ, ದೇಶದ ಬಗೆಗಿನ ಬದ್ಧತೆ, ಕಾಳಜಿ ಇವು ಅವರನ್ನು ಓರ್ವ ಪರಿಪೂರ್ಣ ನಾಯಕನನ್ನಾಗಿಸಿದೆ'' ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಇನ್ನು ಪಾದಯಾತ್ರೆ ಇಂದು ಸಂಜೆ ಬಸವೇಶ್ವರ ಸರ್ಕಲ್ ತಲುಪಲಿದ್ದು, ಅಲ್ಲಿ ರಾಹುಲ್ ಗಾಂಧಿ ಜನರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: 10 ತಿಂಗಳ ಅವಧಿಯಲ್ಲಿ ಸಿಎಂ ಬೊಮ್ಮಾಯಿ, ಕೃಷಿ ಸಚಿವರ ಜಿಲ್ಲೆಯಲ್ಲೇ 112 ರೈತರ ಆತ್ಮಹತ್ಯೆ: ದಿನೇಶ್ ಗುಂಡೂರಾವ್ ಕಿಡಿ
ನಡೆದಷ್ಟೂ ಹಿಗ್ಗುತ್ತಿರುವ @RahulGandhi ಅವರ ಉತ್ಸಾಹ, ನೊಂದ ಜನರನ್ನು ಅವರು ಸಂತೈಸಿ, ಬದುಕಿನ ಭರವಸೆ ತುಂಬುವ ರೀತಿ, ದೇಶದ ಬಗೆಗಿನ ಬದ್ಧತೆ, ಕಾಳಜಿ ಇವು ಅವರನ್ನು ಓರ್ವ ಪರಿಪೂರ್ಣ ನಾಯಕನನ್ನಾಗಿಸಿದೆ.
— Siddaramaiah (@siddaramaiah) October 22, 2022
ರಾಹುಲ್ ಗಾಂಧಿಯವರ ತಾಳ್ಮೆ, ಪರಿಶ್ರಮ, ದೃಢ ಸಂಕಲ್ಪಕ್ಕೆ ನನ್ನದೊಂದು ಸಲಾಂ.#BharatJodoYatra pic.twitter.com/EcgtxioeNq