ಪೋಷಕರಿಂದಲೇ 100 ರೂ. ದೇಣಿಗೆ ಸಂಗ್ರಹ; ಭಾರೀ ವಿರೋಧದ ಬೆನ್ನಲ್ಲೇ ಸುತ್ತೋಲೆ ಹಿಂಪಡೆದ ಶಿಕ್ಷಣ ಇಲಾಖೆ
Update: 2022-10-22 13:03 GMT
ಬೆಂಗಳೂರು: ಶಾಲೆಯಲ್ಲಿ ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿದ್ಯಾರ್ಥಿಗಳ ಪೋಷಕರಿಂದಲೇ ಮಾಸಿಕ 100 ರೂ.ಗಳನ್ನು ದೇಣಿಗೆ ಸಂಗ್ರಹಿಸಲು ಸುತ್ತೋಲೆ ಹೊರಡಿಸಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇದೀಗ ಭಾರೀ ವಿರೊಧದ ಬಳಿಕ ವಾಪಸ್ ಪಡೆದುಕೊಂಡಿದೆ.
ವಿದ್ಯಾರ್ಥಿಗಳ ಪೋಷಕರಿಂದ ದೇಣಿಗೆ ರೂಪದಲ್ಲಿ ಮಾಸಿಕ ಸುಮಾರು 100 ರೂ.ನಂತೆ ಹಣವನ್ನು ಸಂಗ್ರಹಿಸಿ ಈ ಹಣವನ್ನು ನಿಗದಿತ ಎಸ್‌ಡಿಎಂಸಿ ಖಾತೆಗೆ ಸಂದಾಯ ಮಾಡಲು ಕ್ರಮವಹಿಸಬೇಕು ಎಂದು ಸುತ್ತೋಲೆ ಹೊರಡಿಸಲಾಗಿತ್ತು.
ಈ ಬಗ್ಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರು ವಿರೊಧ ವ್ಯಕ್ತಪಡಸಿದ್ದು, ಆದೇಶ ವಾಪಸ್ ಗೆ ಒತ್ತಾಯಿಸಿದ್ದರು.
ಇದೀಗ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರ ಸೂಚನೆ ಮೇರೆಗೆ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹಿಂಪಡೆದಿದ್ದಾರೆ.