ಶಾಸಕ ಯತ್ನಾಳ್​ಗೆ​ ಪಾಕಿಸ್ತಾನದ ಮೇಲೆ ಪ್ರೀತಿ ಜಾಸ್ತಿ: ಅಸದುದ್ದೀನ್ ಉವೈಸಿ ವಾಗ್ದಾಳಿ

Update: 2022-10-25 11:16 GMT

ವಿಜಯಪುರ:  'ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಅವರಿಗೆ ​ಪಾಕಿಸ್ತಾನದ ಮೇಲೆ ಪ್ರೀತಿ ಜಾಸ್ತಿ. ಅದಕ್ಕಾಗಿ ಅವರು ಪದೇ ಪದೇ ಪಾಕ್ ಹೆಸರು ಉಲ್ಲೇಖ ಮಾಡುತ್ತಾರೆ' ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸದುದ್ದೀನ್‌ ಉವೈಸಿ (Asaduddin Owaisi) ಹೇಳಿದ್ದಾರೆ.

ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ವಿಜಯಪುರಕ್ಕೆ ಆಗಮಿಸಿರುವ ಅಸದುದ್ದೀನ್‌ ಉವೈಸಿ, ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. 

'ನಾವು ಪಾಕಿಸ್ತಾನದ ಹೆಸರು ಕೂಡ ಹೇಳುವುದಿಲ್ಲ. ಆದರೆ, ಶಾಸಕ ಯತ್ನಾಳ್ ಪದೇ ಪದೇ ಪಾಕಿಸ್ತಾನ ಹೆಸರನ್ನೇ ಉಲ್ಲೇಖ ಮಾಡುತ್ತಾರೆ.  ಪಾಕಿಸ್ತಾನ ಮೇಲೆ ಪ್ರೀತಿ ಯಾಕೆ ಇದೆ ಎಂಬುದು ಅವರಿಗೇ ಗೊತ್ತು. ಪಾಕಿಸ್ತಾನ​ ಹೆಸರು ಪದೇ ಪದೇ ಹೇಳು ಎಂದು ಪ್ರಧಾನಿ ಮೋದಿ ಅವರೇ ಯತ್ನಾಳ್​ಗೆ ಹೇಳಿ‌ಕೊಟ್ಟಿರಬಹುದು' ಎಂದು ಕಿಡಿಕಾರಿದರು. 

'ಹಲಾಲ್ ವಿಚಾರದಲ್ಲಿ ಬಿಜೆಪಿ ಕಮಿಷನ್ ಹೊಡೆದಿದೆ. ಬಿಜೆಪಿ ಕಮಿಷನ್‌ ಬಗ್ಗೆ ವೀಡಿಯೋಗಳಿವೆ' ಎಂದು ಗಂಭೀರ ಆರೋಪ ಮಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News