ತುಳು, ಕೊಡವ ಭಾಷೆ ಕೊಲ್ಲಲು ಬಿಜೆಪಿ ಹುನ್ನಾರ: ಕಾಂಗ್ರೆಸ್

Update: 2022-10-25 15:43 GMT

ಕನ್ನಡ ಭಾಷಾ ಅಭಿವೃದ್ಧಿ ವಿದೇಯಕದಲ್ಲಿ ತುಳು ಹಾಗೂ ಕೊಡವ ಭಾಷೆಗಳನ್ನು ಕೈಬಿಟ್ಟಿರುವ ಸರ್ಕಾರ ಇಂಗ್ಲಿಷಿಗೆ ಮಣೆ ಹಾಕಿದೆ.

ಸ್ಥಳೀಯ ಸಂಸ್ಕೃತಿ, ಭಾಷೆಗಳನ್ನು ಮುಗಿಸಿ ಹಾಕುವ ನಾಗಪುರದ ಅಜೆಂಡಾವನ್ನು @BJP4Karnataka ಪಾಲಿಸುತ್ತಿರುವುದು ಇದರಿಂದ ಸಾಬೀತಾಗಿದೆ.

ಕನ್ನಡದೊಂದಿಗೆ ತುಳು, ಕೊಡವ ಭಾಷೆಯನ್ನೂ ಕೊಲ್ಲುವುದು ಬಿಜೆಪಿಯ ಹುನ್ನಾರ. pic.twitter.com/lSiO817eT4

— Karnataka Congress (@INCKarnataka) October 25, 2022

ಬೆಂಗಳೂರು, ಅ.25: ‘ಕನ್ನಡ ಭಾಷೆ ಅಭಿವೃದ್ಧಿ ವಿಧೇಯಕದಲ್ಲಿ ತುಳು ಹಾಗೂ ಕೊಡವ ಭಾಷೆಗಳನ್ನು ಕೈಬಿಟ್ಟಿರುವ ಸರಕಾರ ಇಂಗ್ಲಿಷಿಗೆ ಮಣೆ ಹಾಕಿದೆ. ಸ್ಥಳೀಯ ಸಂಸ್ಕೃತಿ, ಭಾಷೆಗಳನ್ನು ಮುಗಿಸಿ ಹಾಕುವ ನಾಗಪುರದ ಅಜೆಂಡಾವನ್ನು ರಾಜ್ಯ ಬಿಜೆಪಿ ಪಾಲಿಸುತ್ತಿರುವುದು ಇದರಿಂದ ಸಾಬೀತಾಗಿದೆ. ಕನ್ನಡದೊಂದಿಗೆ ತುಳು, ಕೊಡವ ಭಾಷೆಯನ್ನೂ ಕೊಲ್ಲುವುದು ಬಿಜೆಪಿಯ ಹುನ್ನಾರ' ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಟೀಕಿಸಿದೆ.

ಇಂದು ಊಟ ಮಾಡಲು ಇಂದೇ ದುಡಿಯಬೇಕು ಎನ್ನುವಂತಿದೆ ಮೀನುಗಾರರ ಸ್ಥಿತಿ. ಪ್ರಕೃತಿಯ ಪ್ರಕ್ಷುಬ್ಧ ವಾತಾವರಣವಿದ್ದಾಗ ಮೀನುಗಾರಿಕೆಯನ್ನು ನಿಷೇಧಿಸುವ ಸರಕಾರ ಅವರ ಹಸಿವನ್ನೂ ನಿಷೇಧಿಸುತ್ತದೆಯೇ? ಮೀನುಗಾರಿಕೆ ನಿಷೇಧಿತ ದಿನಗಳಲ್ಲಿ 1,800 ರೂ. ಪರಿಹಾರ ನೀಡುವುದಾಗಿ ಹೇಳಿದ್ದ ಬಿಜೆಪಿ, ಈಗ ಆ ಮಾತು ಮರೆತಿದ್ದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News