ಸೋನಿಯಾ ಗಾಂಧಿ ಅವರು ಇಟಲಿ ಮೂಲದವರೇ ಆಗಿರಬಹುದು, ಆದರೆ...: ಕುತೂಹಲ ಮೂಡಿಸಿದ ನಟಿ ರಮ್ಯಾ ಟ್ವೀಟ್

Update: 2022-10-25 18:39 GMT

Sonia ji maybe of italian origin but she’s more Indian than most Indians- for sure.

— Ramya/Divya Spandana (@divyaspandana) October 25, 2022

ಬೆಂಗಳೂರು: ಇತ್ತೀಚೆಗೆ  ರಾಹುಲ್ ಗಾಂಧಿ ಜೊತೆ ಭಾರತ್ ಜೋಡೊ ಯಾತ್ರೆಯಲ್ಲಿ ಹೆಜ್ಜೆಹಾಕಿದ್ದ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು,  ಸೋನಿಯಾ ಗಾಂಧಿ ಕುರಿತು ಟ್ವೀಟ್‌ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 

ಸಕ್ರಿಯ ರಾಜಕೀಯದಿಂದ ದೂರ ಇರುವ ಅವರು, ಇದೀಗ ಮತ್ತೆ ರಾಜಕೀಯ ವಿಚಾರಗಳ ಕುರಿತು ಟ್ವೀಟ್ ಮಾಡುತ್ತಿದ್ದಾರೆ.

''ಸೋನಿಯಾ ಗಾಂಧಿ ಅವರು ಇಟಲಿ ಮೂಲದವರೇ ಆಗಿರಬಹುದು. ಆದರೆ ಸಾಕಷ್ಟು ಭಾರತೀಯರಿಗಿಂತ ಇವರು ನೈಜ ಭಾರತೀಯರಾಗಿದ್ದಾರೆ. ಅದು ಖಚಿತ'’ ಎಂದು ಟ್ವೀಟ್ ಮಾಡಿದ್ದಾರೆ. 

ಇನ್ನು ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಕ್ ಆಯ್ಕೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.'ಬ್ರಿಟನ್ ನಲ್ಲಿ ಭಾರತ ಮೂಲದ ರಿಷಿ ಸುನಕ್ ಪ್ರಧಾನಿಯಾಗಿದ್ದನ್ನು ನಾವು ಸ್ವಾಗುತ್ತಿಸುತ್ತೇವೆ ಎಂದಾದರೆ, ಭಾರತದಲ್ಲಿ ಇಟಲಿ ಮೂಲದ ಸೋನಿಯಾ ಗಾಂಧಿ ಅವರನ್ನು ವಿರೋಧಿಸುವುದು ಯಾವ ಆಧಾರದಲ್ಲಿ?' ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಇನ್ನು ನಟಿ ರಮ್ಯಾ ಅವರು ಕೂಡ ಈ ರೀತಿ ಟ್ವೀಟ್ ಮಾಡುವ ಮೂಲಕ ಧ್ವನಿಗೂಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News