ಸಚಿವ ಸೋಮಣ್ಣ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

Update: 2022-10-27 14:19 GMT

ಮಂಗಳೂರು : ಚಾಮರಾಜನಗರ ಜಿಲ್ಲೆಯ ಹಂಗಳ ಗ್ರಾಮದಲ್ಲಿ ನಡೆದ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ವೇದಿಕೆ ಏರಿದ ಮಹಿಳೆಯೊಬ್ಬರಿಗೆ ಹಲ್ಲೆಗೈದ ರಾಜ್ಯ ವಸತಿ ಸಚಿವ ವಿ. ಸೋಮಣ್ಣ ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿ ಸಿಪಿಐ ಹಾಗೂ ಭಾರತೀಯ ಮಹಿಳಾ ಒಕ್ಕೂಟವು ಗುರುವಾರ ನಗರದ ಮಂಗಳೂರು ಮಿನಿ ವಿಧಾನ ಸೌಧದ ಮುಂದೆ  ಪ್ರತಿಭಟನೆ ನಡೆಸಿತು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ. ಶೇಖರ್ ಹಾಗೂ ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಭಾರತಿ ಪ್ರಶಾಂತ್ ಮಾತನಾಡಿ ಅಧಿಕಾರದ ಮದದಿಂದ ಮತದಾರರ ಮೇಲೆ ಈ ರೀತಿ ದೌರ್ಜನ್ಯ ಎಸಗುತ್ತಿರುವುದು ಬಿಜೆಪಿಗೆ ಸಾಮಾನ್ಯ ಸಂಗತಿಯಾಗಿದೆ. ಮಹಿಳೆಯರನ್ನು ಗೌರವಿಸುತ್ತೇವೆ ಎಂದು ಹೇಳುವ ಬಿಜೆಪಿಗರು ಮಹಿಳೆಯರನ್ನು ಕೀಳಾಗಿ ಕಂಡು ಪೌರುಷ ತೋರುತ್ತಿರುವುದು ವಿಪರ್ಯಾಸ ಎಂದರಲ್ಲದೆ, ತಕ್ಷಣ ಸಚಿವ ಸೋಮಣ್ಣ ರಾಜೀನಾಮೆ ನೀಡಬೇಕು ಅಥವಾ ಮುಖ್ಯಮಂತ್ರಿಯು ಸಚಿವರ  ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಸಿಪಿಐ ನಾಯಕರಾದ ವಿ.ಕುಕ್ಯಾನ್, ಎಚ್.ವಿ. ರಾವ್, ವಿ.ಎಸ್. ಬೇರಿಂಜ, ಬಾಬು ಭಂಡಾರಿ, ಎಂ. ಕರುಣಾಕರ್, ಎ.ಪಿ.ರಾವ್, ಆರ್ಡಿ ಸೋನ್ಸ್ ಭಾರತೀಯ ಮಹಿಳಾ ಒಕ್ಕೂಟದ ನಾಯಕಿಯರಾದ ಸುಲೋಚನಾ ಕವತ್ತಾರು, ವನಜಾ ಬಿ. ಶೇಖರ್, ಕೇಶವತಿ ಕೂರಿಯಾಳ, ಮಮತಾ ಹರೀಶ್, ಸರೋಜಿನಿ ಕೂರಿಯಾಳ, ಅಖಿಲ ಭಾರತ ಯುವ ಜನ ಒಕ್ಕೂಟದ ನಾಯಕರಾದ ಶ್ರೀನಿವಾಸ್ ಭಂಡಾರಿ, ದಿನೇಶ್ ಕಾಯರಮಾರ್, ಸುಧಾಕರ್ ಉರ್ವ ವಹಿಸಿದ್ದರು

Similar News