ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ; ಪ್ರಕರಣ ದಾಖಲು
Update: 2022-11-02 04:31 GMT
ಹೊನ್ನಾಳಿ : ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರ ಎಂ.ಪಿ.ರಮೇಶ್ ಅವರ ಪುತ್ರ ಎಂ.ಆರ್.ಚಂದ್ರಶೇಖರ್ ಎಂಬುವರು ನಾಪತ್ತೆಯಾಗಿದ್ದು, ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆ ಕೈಗೊಂಡಿರುವ ಸಿಪಿಐ ಸಿದ್ದೇಗೌಡ ಅವರ ನೇತತ್ವದ ಪೊಲೀಸರು, ತೀವ್ರ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳದು ಬಂದಿದೆ.
ಈ ಸಂಬಂಧ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರ ಹಾಗೂ ಗುತ್ತಿಗೆದಾರ ರಮೇಶ್ ಹೊನ್ನಾಳಿ ಪೊಲೀಸ್‌ಠಾಣೆಗೆ ದೂರು ದಾಖಲಿಸಿ, 'ಅ 30 ರ ರಾತ್ರಿ 7.30ಕ್ಕೆ ಶಿವಮೊಗ್ಗಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ಈ ವರೆಗೂ ಮನೆಗೆ ಬಂದಿಲ್ಲ, ಈ ಬಗ್ಗೆ ಆತನ ಸ್ನೇಹಿತರು ಹಾಗೂ ಎಲ್ಲಾ ಕಡೆ ಹುಡುಕಾಡಿದರೂ ನನ್ನ ಮಗನ ಪತ್ತೆಯಾಗಿಲ್ಲ' ಎಂದು ದೂರು ನೀಡಿದ್ದಾರೆ.
ಇದನ್ನೂ ಓದಿ: ಕನ್ನಡಿಗರು ಧರ್ಮ ಭೇದವಿಲ್ಲದೆ ಸಹೋದರರಂತೆ ಬಾಳಬೇಕು: ರಜನಿಕಾಂತ್ ಕರೆ