ಚಿತ್ರದುರ್ಗ: BJP ಶಾಸಕನಿಗೆ ಹನಿಟ್ರ್ಯಾಪ್ ಯತ್ನ ಆರೋಪ; ದೂರು ದಾಖಲು
Update: 2022-11-02 05:43 GMT
ಚಿತ್ರದುರ್ಗ. ನ.2: ಬಿಜೆಪಿ (BJP) ಶಾಸಕರೊಬ್ಬರಿಗೆ ಅಶ್ಲೀಲ ವಿಡಿಯೋ ಕಳುಹಿಸಿ, ಹನಿಟ್ರ್ಯಾಪ್ ಗೆ ಯತ್ನಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರ ಮೊಬೈಲ್ಗೆ ಅಪರಿಚಿತ ಯುವತಿಯೋರ್ವಳು ವಿಡಿಯೋ ಕಾಲ್ ಹಾಗೂ ಅಶ್ಲೀಲ ವಿಡಿಯೋಗಳನ್ನು ಕಳುಹಿಸಿದ್ದಾಳೆನ್ನಲಾಗಿದೆ. ಈ ಬಗ್ಗೆ ಶಾಸಕರು ಚಿತ್ರದುರ್ಗ ಸೈಬರ್ ಠಾಣೆಗೆ (Cybercrime police station,Chitradurga) ದೂರು ನೀಡಿದ್ದಾರೆ.
'ವೀಡಿಯೋ ಕಳುಹಿಸಿದ ನಂಬರಿನ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಿ' ಎಂದು ತಿಪ್ಪಾರೆಡ್ಡಿ ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಚಿತ್ರದುರ್ಗ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ವಿಟ್ಲ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಬಾವಿಯಲ್ಲಿ ಪತ್ತೆ