2023 ನೇ ಸಾಲಿನ SSLC ಮುಖ್ಯ ಪರೀಕ್ಷೆಗೆ ನೊಂದಣಿ: ದಿನಾಂಕ ವಿಸ್ತರಣೆ
Update: 2022-11-07 14:20 GMT
ರಾಮನಗರ, ನ. 7: 2023ನೆ ಸಾಲಿನ ಎಪ್ರಿಲ್‍ನಲ್ಲಿ ನಡೆಯಲಿರುವ ಎಸೆಸೆಲ್ಸಿ (SSLC ) ಮುಖ್ಯ ಪರೀಕ್ಷೆಗೆ ಹಾಜರಾಗುವ ಖಾಸಗಿ ಅಭ್ಯರ್ಥಿಗಳು ಮತ್ತು ಎಲ್ಲ ವಿಧದ ಅರ್ಹ ಪುನರಾವರ್ತಿತ ಅಭ್ಯರ್ಥಿಗಳು ಕಡ್ಡಾಯವಾಗಿ ನೊಂದಣಿ ಮಾಡಿಕೊಳ್ಳಲು ನ.10ರೊಳಗೆ ಕಾಲವಕಾಶ ನೀಡಲಾಗಿದೆ.
ಪರೀಕ್ಷೆಗೆ ನೊಂದಣಿ ಮಾಡಿಕೊಳ್ಳುವ ಅರ್ಹ ಅಭ್ಯರ್ಥಿಗಳು ಕೂಡಲೇ ಹತ್ತಿರದ ಪ್ರೌಢಾಶಾಲೆಗಳಲ್ಲಿ ನೊಂದಾಯಿಸಿಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.