ಕಲಬುರಗಿ | ಭೀಕರ ರಸ್ತೆ ಅಪಘಾತ, ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು

Update: 2022-11-09 05:53 GMT

ಕಲಬುರಗಿ: ಇಲ್ಲಿನ ಕಮಲಾಪುರ ತಾಲೂಕು ವ್ಯಾಪ್ತಿಯ ನಾವದಗಿ ಗ್ರಾಮದ ಹತ್ತಿರ ನಿಂತಿದ್ದ ಲಾರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ  ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಗಳವಾರ ರಾತ್ರಿ ನಡೆದಿರುವುದಾಗಿ ವರದಿಯಾಗಿದೆ.

ಕಮಲಾಪುರ ತಾಲೂಕಿನ ಗೋಗಿ ತಾಂಡಾ ನಿವಾಸಿಗಳಾದ ದೀಪಕ್ (45), ಯುವರಾಜ್ (17) ಹಾಗೂ ರಾಹುಲ್ (17) ಮೃತಪಟ್ಟ ದುರ್ದೈವಿಗಳು. ದೇವರ ಹರಕೆ ತೀರಿಸಲು ಗೋಗಿ ತಾಂಡಾದಿಂದ ಸಾವಳಗಿ ತಾಂಡಾಕ್ಕೆ ಕುಟುಂಬಸ್ಥರು ಕ್ರೂಸರ್ನಲ್ಲಿ ತೆರಳಿದ್ದು, ಈ   ಮೂವರು ಬೈಕ್ ಮೇಲೆ ತೆರಳುತ್ತಿದ್ದ ವೇಳೆ ಈ ಘಟನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Similar News