ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ: ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗ ರಚನೆಗೆ ಸರ್ಕಾರ ನಿರ್ಧಾರ
ದಾವಣಗೆರೆ, ನ. 9: 'ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮತ್ತು ಇತರೆ ಸೌಲಭ್ಯಗಳ ವಿಸ್ತರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅವರ ಅಧ್ಯಕ್ಷತೆಯಲ್ಲಿ ಏಳನೇ ವೇತನ ಆಯೋಗವನ್ನು (7th Pay Commission) ರಚಿಸಲು ತೀರ್ಮಾನಿಸಲಾಗಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫೋಷಿಸಿದ್ದಾರೆ.
ಹೊನ್ನಾಳಿಗೆ ತೆರಳುವ ಪೂರ್ವದಲ್ಲಿ ನಗರದ ಜಿಎಂಐಟಿ ಹೆಲಿಪ್ಯಾಡ್ ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
''ಸಾಕಷ್ಟು ದಿನಗಳಿಂದ ಸರ್ಕಾರಿ ನೌಕರರಿಂದ ಒತ್ತಾಯಗಳಿದ್ದವು, ಇದರಂತೆ ವೇತನ ಪರಿಷ್ಕರಣೆ ಹಾಗೂ ಸೌಲಭ್ಯಗಳ ವಿಸ್ತರಣೆಗೆ 7ನೇ ವೇತನ ಆಯೋಗ ರಚಿಸಲು ನಿರ್ಧರಿಸಲಾಗಿದೆ. ಅಕ್ಟೋಬರ್ ಅಂತ್ಯದ ಒಳಗೆ ವೇತನ ಆಯೋಗ ರಚನೆ ಮಾಡಲಾಗುತ್ತದೆ'' ಎಂದು ಭರವಸೆ ನೀಡಿದರು.
"ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಶ್ರೀ ಕೆ. ಸುಧಾಕರ್ ರಾವ್ ರವರ ನೇತೃತ್ವದಲ್ಲಿ 7 ನೇ ವೇತನ ಆಯೋಗ ರಚಿಸಲು ತೀರ್ಮಾನಿಸಲಾಗಿದೆ." ಮುಖ್ಯಮಂತ್ರಿ : @BSBommai pic.twitter.com/ogPXRrrRyc
— CM of Karnataka (@CMofKarnataka) November 9, 2022