24 ಗಂಟೆಯೊಳಗೆ ಸುತ್ತೋಲೆ ವಾಪಸ್; 'ಯೂಟರ್ನ್ ಸರ್ಕಾರ ಎಂದು ಹೆಸರಿಟ್ಟುಕೊಳ್ಳಿ' ಎಂದ ಕಾಂಗ್ರೆಸ್

Update: 2022-11-09 10:19 GMT

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ನ.11ಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆ ಸರಕಾರಿ, ಅನುದಾನಿತ, ಅನುದಾನ ರಹಿತ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಕಾಲೇಜು ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಕರೆತರಬೇಕು ಎಂದು ಹೊರಡಿಸಿದ್ದ ಸುತ್ತೋಲೆಯನ್ನು ವ್ಯಾಪಕ ವಿರೋಧದ ಬಳಿಕ ವಾಪಸ್ ಪಡೆದಿಕೊಂಡಿದ್ದು, ಈ ಬಗ್ಗೆ ಕಾಂಗ್ರೆಸ್ (INCKarnataka) ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. 

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ''ಬೊಮ್ಮಾಯಿ ಅವರೇ,  ನಿಮ್ಮ ಸರ್ಕಾರಕ್ಕೆ ಯೂಟರ್ನ್ ಸರ್ಕಾರ ಎಂದು ಹೆಸರಿಟ್ಟುಕೊಳ್ಳಿ! ಜನ ಬೆಂಬಲ ಕಳೆದುಕೊಂಡು, ಖಾಲಿ ಕುರ್ಚಿಗಳ ದರ್ಶನ ಪಡೆಯುತ್ತಿರುವ ಸರ್ಕಾರ ಈಗ ವಿದ್ಯಾರ್ಥಿಗಳನ್ನು ಬಲವಂತವಾಗಿ ಕರೆಸಿಕೊಳ್ಳಲು ಪ್ರಯತ್ನಿಸಿದ್ದು ನಾಚಿಕೆಗೇಡು. ವಿದ್ಯಾರ್ಥಿಗಳನ್ನು ಕರೆಸುವಂತೆ ಅಧಿಕಾರಿಗಳಿಗೆ ಹೇಳಿದವರಾರು?'' ಎಂದು ಮುಖ್ಯಮಂತ್ರಿಯವರನ್ನು ಪ್ರಶ್ನೆ ಮಾಡಿದೆ. 

ಇದನ್ನೂ ಓದಿ... ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕರೆತರಲು ಸೂಚನೆ: ವಿರೋಧದ ಬಳಿಕ ಸುತ್ತೋಲೆ ವಾಪಸ್‌

''ತನ್ನ ಕಾರ್ಯಕ್ರಮಕ್ಕೆ ಜನ ಬರುವುದಿಲ್ಲ ಎಂಬುದನ್ನು ಅರಿತ ಬಿಜೆಪಿ ಸರ್ಕಾರವು, ಪ್ರಧಾನಿ ಮೋದಿ ಅವರು ಭಾಗವಹಿಸುತ್ತಿರುವ ಕಾರ್ಯಕ್ರಮಕ್ಕೆ ಕಾಲೇಜು ವಿದ್ಯಾರ್ಥಿಗಳನ್ನು ತರಲು ಯತ್ನಿಸಿ, ಭಾರೀ ವಿರೋಧದ ನಂತರ ತನ್ನ ಆದೇಶವನ್ನು ಹಿಂಪಡೆದಿದೆ. ವಿದ್ಯಾರ್ಥಿಗಳನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳಲು ಯತ್ನಿಸಿರುವುದು ನಾಚಿಕೆಗೇಡಿನ ಸಂಗತಿ''

- ಡಿ.ಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರು

Similar News