ರಾಜ್ಯದಲ್ಲಿ ಶೈಕ್ಷಣಿಕ ಗುಣಮಟ್ಟ ಕುಸಿತ: ರೂಪ್ಸಾ ಖಂಡನೆ

Update: 2022-11-09 16:00 GMT

ಬೆಂಗಳೂರು, ನ. 9: ಕೇಂದ್ರ ಸರಕಾರದ ಶಿಕ್ಷಣ ಸಚಿವಾಲಯವು ರಾಜ್ಯಗಳಲ್ಲಿ ಶಿಕ್ಷಣ ಗುಣಮಟ್ಟದ ಕುರಿತು ಸಮೀಕ್ಷೆಯೊಂದನ್ನು ಪ್ರಕಟಿಸಿದ್ದು, ಅನಗತ್ಯ ವಿವಾದಗಳಿಂದಾಗಿ ರ‍್ಯಾಂಕ್‌ ಪಟ್ಟಿಯಲ್ಲಿ ಕರ್ನಾಟಕವು 13ನೆ ಸ್ಥಾನಕ್ಕೆ ಕುಸಿದಿದೆ ಎಂದು  ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಮ್ಯಾನೇಜಮೆಂಟ್ ಸಂಘ (ರೂಪ್ಸಾ)  ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಬೇಸರ ವ್ಯಕ್ತಪಡಿಸಿದ್ದಾರೆ. 

ಒಂದು ಸಾವಿರ ಅಂಕಗಳನ್ನು ಆಧಾರಿಸಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಕೇರಳ, ಆಂಧ್ರಪ್ರದೇಶ, ಚಂಡೀಗಡ, ಗುಜರಾತ್, ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ ಅಗ್ರಸ್ಥಾನದಲ್ಲಿದೆ. ಕರ್ನಾಟಕವು 13ನೆ ಸ್ಥಾನದಲ್ಲಿದೆ. 

ಸರಕಾರವು ಕಟ್ಟಡ ನಿರ್ಮಾಣ, ಮೂಲಭೂತ ಸೌಕರ್ಯಗಳಿಗಾಗಿ ಹಣ ಮೀಸಲಿಟ್ಟಿಲ್ಲ. ಸರಿಯಾದ ಸಮಯದಲ್ಲಿ ಪುಸ್ತಕ ವಿತರಿಸಿಲ್ಲ. ಈ ವಿಫಲತೆಯನ್ನು ಮುಚ್ಚಿಡಲು  ಧಾರ್ಮಿಕವಾಗಿ ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತಿ ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿದರು. ಹಾಗಾಗಿ ರಾಜ್ಯ ದಲ್ಲಿ ಶೈಕ್ಷಣಿಕ ಗುಣಮಟ್ಟ ಹಾಳಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಶ್ರೇಷ್ಠ ಸಾರಿಗೆ ಪ್ರಶಸ್ತಿಗೆ ‘ನಮ್ಮ ಮೆಟ್ರೋ’ ಭಾಜನ

Similar News